ಕಲ್ಕಿ 2898 ಎಡಿ ಚಿತ್ರದ 4 ದಿನದ ಗಳಿಕೆ ಕೇಳಿದರೆ ಶಾಕ್ ಆಗುತ್ತೀರಾ!!
ಹೈದರಾಬಾದ್: ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅವರ ಮುಖ್ಯಭೂಮಿಕೆಯಲ್ಲಿ ತೆರೆಗೆ ಬಂದಿರುವ ಕಲ್ಕಿ 2898 ಎಡಿ ಚಿತ್ರ ಚಿತ್ರಾಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ ಆಶ್ಚರ್ಯ ಪಡುವ ರೀತಿಯಲ್ಲಿ ತನ್ನ ಗಲ್ಲಾ ಪೆಟ್ಟಿಗೆ ತುಂಬಿಕೊಳ್ಳುತ್ತಿದೆ. ಹಾಗಾದರೆ, ಎಷ್ಟಾಯಿತು ಚಿತ್ರದ ಕಲೆಕ್ಷನ್?
ನಿಮ್ಮ ಅಂದಾಜು ಸುಳ್ಳಾಗಬಹುದು. ಯಾಕೆಂದರೆ ಕೇವಲ ನಾಲ್ಕೇ ದಿನಕ್ಕೆ ಬರೊಬ್ಬರಿ ₹500 ಕೋಟಿ ಹಣವನ್ನು ಗಳಿಸಿದೆ. ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರ ಹರಿವು ಟಾಕೀಸಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಚಿತ್ರವನ್ನು ಬರೊಬ್ಬರಿ ₹600 ಕೋಟಿ ಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗಿದೆ.
ಚಿತ್ರದ ಕಥೆಯು ಹಿಂದೂ ಧರ್ಮದ ಪೌರಾಣಿಕ ನಂಬಿಕೆಗಳ ಮಿಶ್ರಣವಾಗಿದೆ. ಇದರಲ್ಲಿ ಕಾಲ್ಪನಿಕ ಕಥೆಯನ್ನು ಸೇರಿಸಿ, ಈ ಪ್ರಥ್ವಿಯ ಭವಿಷ್ಯವನ್ನು ಕಲ್ಪನೆ ಮಾಡಿಕೊಂಡು ಕಥೆ ಹೆಣೆಯಲಾಗಿದೆ. ಕಲಿಯುಗದ ಕೊನೆಯ ಹಂತ, ಕಲಿಯ ದೌರ್ಜನ್ಯ, ಭೂಮಿಯ ಮೇಲೆ ಜೀವಿಸುವ ಸಕಲ ಜೀವಿಗಳ ಗೋಳಾಟ, ರಕ್ಷಕ ಬರುವ ನಂಬಿಕೆ, ಕಲ್ಕಿಯ ಆಗಮನಕ್ಕೆ ಕಾದಿರುವ ಒಂದು ಪಂಗಡ. ಇವೇ ಕಲ್ಕಿ 2898 ಎಡಿ ಚಿತ್ರದ ಮೂಲವಾಗಿದೆ. ಭಾರತ ಚಲನಚಿತ್ರ ಇತಿಹಾಸದಲ್ಲಿ ಈ ಚಿತ್ರ ತನ್ನದೇ ಆದ ಒಂದು ಸ್ಥಾನ ಸ್ಥಾಪಿಸಿಕೊಂಡಿದೆ.