Politics
“ಜೈ ಪ್ಯಾಲೆಸ್ಟೈನ್” ವಿರುದ್ಧ ರಾಷ್ಟ್ರಪತಿಗಳಿಗೆ ದೂರು.
ನವದೆಹಲಿ: ನಿನ್ನೆ ದಿನಾಂಕ:25/04/2024 ರಂದು, ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಮುಖಂಡ ಹಾಗೂ ಹೈದರಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ “ಜೈ ಪ್ಯಾಲೆಸ್ಟೈನ್” ಎಂದು ಹೇಳಿದರು. ಇದರ ವಿರುದ್ಧ ಅನೇಕರು ದ್ವನಿ ಎತ್ತಿದ್ದಾರೆ. ಗೌರವಾನ್ವಿತ ಸ್ಥಾನದಲ್ಲಿ ಕೂರುವ ಸಂಸದರು, ಈ ರೀತಿಯ ಹೇಳಿಕೆ ನೀಡಿದರೆ, ಭಾರತದ ವಿದೇಶಿ ನೀತಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬ ಅನಿಸಿಕೆಗಳು ಹೊರಬರುತ್ತಿದೆ.
ಅಸಾದುದ್ದೀನ್ ಓವೈಸಿ ಅವರ ವಿರುದ್ಧ ಅಡ್ವೋಕೇಟ್ ಹರಿ ಶಂಕರ್ ಜೈನ, ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. “25.06.2024 ರಂದು ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ವಿದೇಶಿ ರಾಷ್ಟ್ರಕ್ಕೆ ಅಂದರೆ ಪ್ಯಾಲೆಸ್ತೀನ್‌ಗೆ ನಿಷ್ಠೆ ಮತ್ತು ಬದ್ಧತೆಯನ್ನು ತೋರಿಸುವುದಕ್ಕಾಗಿ” ಸಂಸದರನ್ನು ಅನರ್ಹಗೊಳಿಸುವಂತೆ ಅವರು ರಾಷ್ಟ್ರಪತಿಗಳಿಗೆ ಒತ್ತಾಯಿಸಿದ್ದಾರೆ.