ಹಮೀರ್ಪುರ್: ಹಿಮಾಚಲ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಬಹೆರ್ವಿನ್ ಜಟ್ಟನ್ ಗ್ರಾಮದ ವ್ಯಾಪಾರಿ ಲಲಿತ್ ಧಿಮಾನ್ ಅವರಿಗೆ 2024 ಡಿಸೆಂಬರ್ ತಿಂಗಳಿಗೆ ₹210.42 ಕೋಟಿ (₹2 ಬಿಲಿಯನ್) ಭಯಂಕರ ಬಿಲ್ ಬಂದಿದ್ದು, ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.
ನವೆಂಬರ್‌ನಲ್ಲಿ ಅವರು ₹2,500 ಮಾತ್ರ ಬಿಲ್ ಪಾವತಿಸಿದ್ದವರಾಗಿದ್ದು, ಇಷ್ಟು ದೊಡ್ಡ ಮೊತ್ತದ ಬಿಲ್‌ನಿಂದ ಶಾಕ್ ಹೊಡೆದಿದ್ದ ಅವರು ತಕ್ಷಣವೇ ವಿದ್ಯುತ್ ಮಂಡಳಿಗೆ ದೂರು ನೀಡಿದರು. ನಂತರ, ತಾಂತ್ರಿಕ ದೋಷ ಕಾರಣ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಬಿಲ್ ₹4,047ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗುಜರಾತಿನಲ್ಲೂ ಇಂತಹುದೇ ಹೋಲುವ ಘಟನೆ:
ನವೆಂಬರ್ 2023ರಲ್ಲಿ, ಗುಜರಾತ್‌ನ ವಲ್ಸಾಡ್ನಲ್ಲಿ ಅನ್ಸಾರಿ ಎಂಬ ಟೈಲರ್‌ಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ₹86.41 ಲಕ್ಷ ಬಿಲ್ ನೋಡಿದ ಅನ್ಸಾರಿ, ತಕ್ಷಣವೇ ಅಧಿಕಾರಿಗಳ ಬಳಿ ತೆರಳಿ ದೋಷವನ್ನು ತಿದ್ದಿಸಿಕೊಂಡರು. ಮಿಟರ್ ಓದುವಾಗ 1 ಮತ್ತು 0 ಅಂಕೆಗಳನ್ನು ತಪ್ಪಾಗಿ ಗ್ರಹಿಸಿದ್ದು, ಇದರಿಂದಲೇ ಬಿಲ್ ಮೊತ್ತ ಅಸಾಮಾನ್ಯವಾಗಿ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಯಿತು. ತಿದ್ದುಪಡಿ ಬಳಿಕ ಬಿಲ್ ₹1,540ಗೆ ಇಳಿಸಲಾಯಿತು.
ಅನ್ಸಾರಿ ಅವರು ಪ್ರತೀ ತಿಂಗಳು ₹2,000ಕ್ಕೂ ಕಡಿಮೆ ಬಿಲ್ ಪಾವತಿಸುತ್ತಿದ್ದವರು. “ಇದು ಒಂದು ಲೋಪ. ನಾವು ಹೊಸ ಬಿಲ್ ನೀಡಿದ್ದೇವೆ,” ಎಂದು ದಕ್ಷಿಣ ಗುಜರಾತ್ ವಿಜ್ ಕಂಪನಿ ಲಿಮಿಟೆಡ್ನ ಉದ್ಯೋಗಿ ಹಿತೇಶ್ ಪಟೇಲ್ ಅವರು ಆ ಸಂದರ್ಭದಲ್ಲೇ ಹೇಳಿದ್ದರು.
ತಾಂತ್ರಿಕ ದೋಷ: ಅಚ್ಚರಿಗೊಂಡ ಜನರು
ಇಂತಹ ಅಪಘಾತಗಳು ಸಾಮಾನ್ಯವಾಗಿ ತಾಂತ್ರಿಕ ದೋಷ ಅಥವಾ ಮಾನವ ಲೋಪದಿಂದ ಉಂಟಾಗುತ್ತವೆ. ಆದರೆ, ಗ್ರಾಹಕರಿಗೆ ಇದರಿಂದ ಉಂಟಾಗುವ ತೊಂದರೆಗಳು ಅಚ್ಚರಿಗೆ ಕಾರಣವಾಗುತ್ತವೆ.