Politics
ಕಾಂಗ್ರೆಸ್ ಬಿಡುಗಡೆ ಮಾಡಿದೆ ತನ್ನ ಮೊದಲ ಅಭ್ಯರ್ಥಿ ಪಟ್ಟಿ.

ಮಾರ್ಚ್ 9. ಶನಿವಾರದಂದು 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತನ್ನ ಮೊದಲ ಪಟ್ಟಿಯಲ್ಲಿ 39 ಅಭ್ಯರ್ಥಿಗಳ ಹೆಸರನ್ನು ಸೂಚಿಸಿರುವ ಕಾಂಗ್ರೆಸ್ ಪಕ್ಷ, ಕರ್ನಾಟಕದ ಏಳು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದೆ.
- ಎಚ್.ಆರ್. ಅಲ್ಗೂರ (ಬಿಜಾಪುರ ಲೋಕಸಭಾ ಕ್ಷೇತ್ರ)
- ಆನಂದ ಸ್ವಾಮಿ ಗಡ್ಡದೇವರ ಮಠ (ಹಾವೇರಿ ಲೋಕಸಭಾ ಕ್ಷೇತ್ರ)
- ಶ್ರೀಮತಿ ಗೀತಾ ಶಿವರಾಜಕುಮಾರ್ (ಶಿವಮೊಗ್ಗ ಲೋಕಸಭಾ ಕ್ಷೇತ್ರ)
- ಎಂ. ಶ್ರೇಯಸ್ ಪಟೇಲ್ ( ಹಾಸನ ಲೋಕಸಭಾ ಕ್ಷೇತ್ರ)
- ಎಸ್.ಪಿ. ಮುದ್ದಹನುಮೇಗೌಡ ಗೌಡ ( ತುಮಕೂರು ಲೋಕಸಭಾ ಕ್ಷೇತ್ರ)
- ವೆಂಕಟರಾಮೇ ಗೌಡ (ಮಂಡ್ಯ ಲೋಕಸಭಾ ಕ್ಷೇತ್ರ)
- ಡಿ.ಕೆ. ಸುರೇಶ್ (ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ)
ಕರ್ನಾಟಕ ರಾಜ್ಯ ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಇವುಗಳಲ್ಲಿ ಕಾಂಗ್ರೆಸ್ ತನ್ನ ಏಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಅದೇ ರೀತಿ ಕಾಂಗ್ರೆಸ್ ವರಿಷ್ಠ ನಾಯಕರು ಇನ್ನುಳಿದ ಕ್ಷೇತ್ರಗಳಿಗೆ ಮುಂಬರುವ ಎರಡನೇ ಅಭ್ಯರ್ಥಿ ಪಟ್ಟಿಯಲ್ಲಿ ಹೆಸರು ಸೂಚಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.