ಬಳ್ಳಾರಿ ಜೈಲಿಗೆ ದರ್ಶನ್ ವರ್ಗಾವಣೆ: ಪೋಲಿಸರ ಭದ್ರತೆ ಹೇಗಿತ್ತು..?!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಕರೆದೊಯ್ಯುವ ಮೂಲಕ ಪೊಲೀಸರು ಹೊಸ ಸಂಚಲನ ಸೃಷ್ಟಿಸಿದ್ದಾರೆ. ದರ್ಶನ್ ಅವರನ್ನು ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ಬಳ್ಳಾರಿಗೆ ಕರೆ ತರಲಾಯಿತು.
ಬೆಳಿಗ್ಗೆ 4 ಗಂಟೆಗೆ ಪರಪ್ಪನ ಅಗ್ರಹಾರದಿಂದ ಹೊರಟ ಪೊಲೀಸ್ ವಾಹನ, ಮೇಕ್ರಿ ವೃತ್ತ, ಹೆಬ್ಬಾಳ, ಯಲಹಂಕ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿಯತ್ತ ಪ್ರಯಾಣಿಸಿತು. ದರ್ಶನ್ ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ಕರೆತರಲಾಯಿತು. ಟೀ ಶರ್ಟ್, ಜೀನ್ಸ್ ಮತ್ತು ಬೆಡ್ ಶೀಟ್ ಹಿಡಿದುಕೊಂಡು ದರ್ಶನ್ ಬಳ್ಳಾರಿ ಜೈಲು ಪ್ರವೇಶಿಸುವ ದೃಶ್ಯ ಜನರಲ್ಲಿ ಕುತೂಹಲ ಮೂಡಿಸಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಬರುತ್ತಿರುವ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿದ್ದರಿಂದ ಜನರು ಜೈಲಿನ ರಸ್ತೆಯಲ್ಲಿ ನಿಂತು ಇವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬಳ್ಳಾರಿ ನಗರದಲ್ಲಿ ಈ ಸುದ್ದಿ ಜನರಲ್ಲಿ ಕುತೂಹಲವನ್ನೂ ಮತ್ತು ಆಕಾಂಕ್ಷೆಯನ್ನೂ ಹೆಚ್ಚಿಸಿತ್ತು.
ಎಚ್ಚರಿಕೆಯಿಂದ ನಡೆದಿದ್ದ ಈ ಸ್ಥಳಾಂತರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪೊಲೀಸರು ಈ ಕ್ರಮವನ್ನು ಭದ್ರತಾ ದೃಷ್ಟಿಯಿಂದ ಹಗುರವಾಗಿ ತೆಗೆದುಕೊಳ್ಳದೆ ಸೂಕ್ತ ಕ್ರಮಗಳು ಕೈಗೊಂಡಿದ್ದಾರೆ.