Bengaluru
ಅಶ್ವತ್ಥಾಮ ಇನ್ನಿಲ್ಲ.
ಮೈಸೂರು: ನಾಡಹಬ್ಬ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ 38 ವರ್ಷದ ‘ಅಶ್ವತ್ಥಾಮ’ ಎಂಬ ಆನೆ ಇಂದು ಹುಣಸೂರು ಬಳಿ ಅಸುನೀಗಿದೆ. ಸಾವಿಗೆ ಸೋಲಾರ್ ವಿದ್ಯುತ್ ತಂತಿ ಕಟ್ಪಿದ್ದ ಬೇಲಿ ತಗುಲಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಅಶ್ವತ್ಥಾಮನನ್ನು 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಳಿ ಸೆರೆ ಹಿಡಿಯಲಾಗಿತ್ತು. ಇದಕ್ಕೆ ನಡಿಗೆ ತಾಲೀಮುಗಳನ್ನು ಕಲಿಸಿ 2021 ರಲ್ಲಿ ದಸರಾ ಮಹೋತ್ಸವಕ್ಕೆ ಕರೆದು ತರಲಾಗಿತ್ತು. ಆದರೆ ಜಂಬೂಸವಾರಿ ಮೆರವಣಿಗೆಗೆ ಭಾಗವಹಿಸಿರಲಿಲ್ಲ.