ಡೀಪ್ ಫೇಕ್ ಎನ್ನುವ ಡಿಜಿಟಲ್ ಲೋಕದ ಸಾಮಾಜಿಕ ಪಿಡುಗು..!

ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳೆದಂತೆ ಸವಲತ್ತುಗಳ ಜೊತೆಗೆ ಅಪಾಯವು ಉಪ ಉತ್ಪನ್ನವಾಗಿ ಬರುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸವಲತ್ತುಗಳನ್ನು ನಿರಾಕರಿಸಲಾಗದು, ಹೀಗಾಗಿ ಅನಿರೀಕ್ಷಿತ ಅಪಾಯಗಳನ್ನು ಎಷ್ಟು ಸುರಕ್ಷಿತವಾಗಿ ಎದುರಿಸಲು ನಾವು ಸಜ್ಜಾಗಿದ್ದೇವೆ ಎನ್ನುವುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಈಗ ಇಂಥದ್ದೇ ಅಪಾಯ ಹಾಗೂ ಆತಂಕವನ್ನು ಡೀಪ್ ಫೇಕ್ ಎನ್ನುವ ತಂತ್ರಜ್ಞಾನ ತೆರೆದಿಟ್ಟಿದೆ.
ಚೀನಾದ ತಂತ್ರಜ್ಞರು ಕಳೆದೊಂದು ದಶಕಗಳಿಂದ ಡೀಪ್ ಫೇಕ್ ತಂತ್ರಜ್ಞಾನದ ಮೇಲೆ ಕೆಲಸ ಮಾಡಿದ್ದಾರೆ. ಇದರ ಅಂತಿಮ ರೂಪವು ಇಂದು ಡಿಜಿಟಲ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಪರಿಣಾಮವಾಗಿ ಫೇಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಇದು ಇನ್ನಷ್ಟು ಸಾಮಾಜಿಕ ಆತಂಕ ಸೃಷ್ಟಿಸುವ ಮುನ್ನ ನಾವು ಜಾಗೃತರಾಗಬೇಕಿದೆ. ಮುನ್ನೆಚ್ಚರಿಕೆ ಮತ್ತು ಜಾಗೃತಿ ತೆಗೆದುಕೊಳ್ಳುವುದು ಮಾತ್ರ ಇದಕ್ಕೆ ಮದ್ದಾಗಿದೆ.
ಸ್ವಲ್ಪ ದಿನಗಳ ಹಿಂದೆ ನಟಿ ರಶ್ಮಿಕಾ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇದಾದ ಬಳಿಕ ಅನೇಕ ವಿಡಿಯೋಗಳು ಸದ್ದು ಮಾಡುತ್ತಿವೆ. ಈ ವಿಡಿಯೋಗಳು ಸಾಕಷ್ಟು ಸೋಶಿಯಲ್ ಮೀಡಿಯಾ ಇಂಫ್ಲುಎನ್ಸರ್ ಗಳ ವಿಡಿಯೋ ಕೂಡ ಅಪ್ಲೋಡ್ ಮಾಡಲಾಗಿದೆ. ಇವೆಲ್ಲ ಡೀಪ್ ಫೇಕ್ ಎನ್ನುವ ಡಿಜಿಟಲ್ ಭಯೋತ್ಪಾದನೆಯ ಟೀಸರ್ ಗಳು ಈ ವಿಡಿಯೋಗಳು ಶೀಘ್ರದಲ್ಲಿ ನಮ್ಮ ನಿಮ್ಮ ಮನೆಯ ಬಾಗಿಲಿಗೂ ಬರಬಹುದು.

ಎಂಎಸ್ ಧೋನಿ ಸಿನಿಮಾದಲ್ಲಿ ಧೋನಿ ಆಡಿರುವ ನೈಜ್ಯ ಪಂದ್ಯದ ವಿಡಿಯೋಗಳಿಗೆ ಸುಶಾಂತ್ ಸಿಂಗ್ ರಜಪೂತ ಅವರ ಮುಖವನ್ನು ಹಾಕಲಾಗಿತ್ತು. ಈ ದುಬಾರಿ ತಂತ್ರಜ್ಞಾನವನ್ನು ಸಿನೆಮಾ ರಂಗದಲ್ಲಿ ಆಗಾಗ ಬಳಸಲಾಗುತ್ತಿತ್ತು. ಆದರೆ ಈಗ ಕೃತಕ ಬುದ್ಧಿಮತ್ತೆ ಸಹಾಯದಿಂದ ಡೀಪ್‌ಫೇಕ್ ಎನ್ನುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಬೇರೆಯವರ ವಿಡಿಯೋಗಳಿಗೆ ನಿರ್ದಿಷ್ಟ ವ್ಯಕ್ತಿಯ ಮುಖವನ್ನು ಅಳವಡಿಸಬಹುದು. ಇದನ್ನು ಯಾವುದೇ ರೀತಿಯಲ್ಲೂ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ತಂತ್ರಜ್ಞಾನ ಮಾಹಿತಿ ಇಲ್ಲದ ಸಾಮಾನ್ಯರ ಕಣ್ಣಿಗೆ ಇದು ನೈಜ್ಯ ವಿಡಿಯೋ ಎನ್ನುವ ಮಟ್ಟಿಗೆ ಗುಣಮಟ್ಟ ಹೊಂದಿರುತ್ತದೆ.
ಭಾರತದಂತಹ ಗೌರವಯುತ ದೇಶದಲ್ಲಿ ಈ ಡೀಪ್ ಫೇಕ್ ವಿಡಿಯೋಗಳು ಸಮಾಜವನ್ನು ಅಲ್ಲೋಲ ಕಲ್ಲೋಲ ಮಾಡಬಹುದು. ಅದೆಷ್ಟು ಅಮಾಯಕರ ಜೀವ ತೆಗೆಯಬಹುದು. ಏಕೆಂದರೆ ನಮ್ಮ ದೇಶದಲ್ಲಿ ಎರಡು ವರ್ಗವಿದೆ ಮೊದಲನೆಯದು ಮರ್ಯಾದೆಗೆ ಅಂಜುತ್ತದೆ. ಇನ್ನೊಂದು ವರ್ಗವು ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಹಣೆಪಟ್ಟಿಯನ್ನು ಕಟ್ಟುತ್ತದೆ. ಈ ಕಾರಣದಿಂದ ಭವಿಷ್ಯದಲ್ಲಿ ಯಾರಿಗಾದರೂ ಹಣೆಪಟ್ಟಿ ಕಟ್ಟಿ ವಿಡಿಯೋ ಹರಿಬಿಡುವ ದೊಡ್ಡ ದಂಧೆ ಆಗಬಹುದು. ಈ ಸಾಮಾಜಿಕ ಜಾಲತಾಣ ಎಷ್ಟು ಕ್ರೂರವೆಂದರೆ ಸುಳ್ಳೆಂದು ಗೊತ್ತಿದ್ದರೂ ಬೇರೆಯವರ ನೋವನ್ನು ನೋಡಿ ಖುಷಿಪಡುವುದು.
ಇದರ ಜೊತೆಗೆ ನಮಗೆ ಬೇಕಾದ ಚಾಟ್ ಗಳನ್ನು ಕ್ರಿಯೇಟ್ ಮಾಡುವ, ವೆಬ್ಸೈಟ್ ಹಾಗೂ ಇತರ ಟೂಲ್ ಗಳು ಕೂಡ ಬಂದಿವೆ. ಹೀಗಾಗಿ ಯಾರನ್ನು ಬೇಕಾದರೂ ಗುರಿಯಾಗಿಸಿಕೊಂಡು ಅಶಾಂತಿ ಸೃಷ್ಟಿಸಬಹುದು. ಒಟ್ಟಾರಿಯಾಗಿ ಈ ಡೀಫ್ ಫೇಕ್ ಎನ್ನುವಂತ ತಂತ್ರಜ್ಞಾನ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಬಹುದೊಡ್ಡ ಸಾಧನ ಆಗಬಹುದು.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ