Politics
ಪ್ರಧಾನಿ ಮೋದಿ ಮನೆಗೆ ಬಂದ ಹೊಸ ಅತಿಥಿ “ದೀಪಜ್ಯೋತಿ”: ಈಕೆಗೆ ಮೋದಿ ಎಂದರೆ ಅದೆಷ್ಟು ಪ್ರೀತಿ ನೋಡಿ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನವದೆಹಲಿಯ ಅಧಿಕೃತ ನಿವಾಸದಲ್ಲಿ ಇಂದು ಸಂತಸದ ವಾತಾವರಣ ಸೃಷ್ಟಿಯಾಗಿದೆ. ಮೋದಿ ಅವರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಪ್ರಧಾನಿಯ ಪ್ರಿಯ ಗೋಮಾತೆ ಹಸು ಹೆರಿಗೆಯಾಗಿ ಒಂದು ಸುಂದರ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಈ ಕರುವನ್ನು ನೋಡಿದ ಕೂಡಲೇ, ಮೋದಿಯವರ ಮುಖದಲ್ಲಿ ಅತೀವ ಸಂತಸ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ ಅವರು ಈ ಕರುವಿಗೆ “ದೀಪಜ್ಯೋತಿ” ಎಂಬ ಹೆಸರನ್ನು ಇಟ್ಟಿದ್ದು, ಇದು ಬೆಳಕಿನ ಪ್ರತೀಕವಾದ ದೀಪವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. “ಗಾವ: ಸರ್ವಸುಖಪ್ರದಾ” ಎಂದು ಶಾಸ್ತ್ರಗಳಲ್ಲಿ ಹೇಳಿದಂತೆ, ಗೋವು ಎಲ್ಲ ರೀತಿಯ ಸಂತೋಷ ಮತ್ತು ಸಮೃದ್ಧಿಯ ಪ್ರತೀಕವಾಗಿದೆ. ಈ ಸುಂದರ ಕ್ಷಣವನ್ನು ಮೋದಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿ ದೇಶಾದ್ಯಂತ ಕುತೂಹಲ ಮೂಡಿಸಿದ್ದು, ಪ್ರಧಾನಿಯ ಇಂತಹ ಕಾರ್ಯಗಳಲ್ಲಿ ತೋರುವ ನಿಷ್ಠೆ ಹಾಗೂ ಧಾರ್ಮಿಕತೆ ಮತ್ತೊಮ್ಮೆ ಜನರ ಗಮನ ಸೆಳೆಯುತ್ತಿದೆ.