ರಾಷ್ಟ್ರ ರಾಜಧಾನಿಯಲ್ಲಿ ಮದುಮಗನನ್ನೇ ಹತ್ಯೆ ಮಾಡಿದ ಹೆತ್ತ ತಂದೆ.

ದೆಹಲಿ: ಮದುವೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರಬೇಕಾದರೆ, ಮದುಮಗನನ್ನು ಹರಿತವಾದ ಆಯುಧದಿಂದ ಇರಿದು, ಹೆತ್ತ ತಂದೆಯೇ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ.
ಗೌರೀಶ್ ಸಿಂಘಾಲ್ (29), ದೆಹಲಿಯಲ್ಲಿ ಸ್ವಂತ ಜಿಮ್ ಹೊಂದಿದ್ದ ಎಂದು ಹೇಳಲಾಗಿದೆ. ಇವರ ತಂದೆ ಮತ್ತು ಈತನ ನಡುವೆ ಇರುಸು ಮುರಿಸು ಯಾವಾಗಲೂ ಇರುತ್ತಿತ್ತು ಎಂದು ಪೋಲಿಸರಿಗೆ ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ.
“ಸ್ಥಳೀಯ ವಿಚಾರಣೆಯ ಮೂಲಕ, ಸಿಂಘಾಲ್ ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದರು ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದರು ಎಂದು ನಾವು ತಿಳಿದುಕೊಂಡಿದ್ದೇವೆ. ಅವರ ಸಂಬಂಧವನ್ನು ಕುಟುಂಬದವರು ಒಪ್ಪಲಿಲ್ಲ. ಆ ವಿಷಯದ ಬಗ್ಗೆ ಸಿಂಘಾಲ್ ಮತ್ತು ಅವರ ತಂದೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನಾವು ತಿಳಿದುಕೊಂಡಿದ್ದೇವೆ.”ಎಂದು ಪೋಲಿಸ್ ಅಧಿಕಾರಿ ಹೇಳಿದರು.
ಗೌರವ್ ಸಿಂಘಾಲ್ ಅವರನ್ನು ಅನೇಕ ಬಾರಿ ತಿವಿದಿದ್ದರು ಎನ್ನಲಾಗಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇದಲ್ಲದೆ, ಗೌರವ್ ಅವರು ಕೊಲೆಯಾದ ಕೋಣೆಯಲ್ಲಿ ವಿವಿಧ ಅಳತೆಯ ಶೂ ಗುರುತುಗಳು ಕಂಡು ಬಂದಿದ್ದು, ಕೊಲೆಯಲ್ಲಿ ಇನ್ನೂ ಕೆಲವರ ಸಹಾಯವಿದೆ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತ ತನಿಖೆಯನ್ನು ಇನ್ನಷ್ಟು ಮುಂದುವರಿಸುವುದಾಗಿ ದೆಹಲಿ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂತೂ, ಮದುಮಗನನ್ನು ದಿಬ್ಬಣದೊಂದಿಗೆ ಮಂಟಪಕ್ಕೆ ಕರೆದುಕೊಂಡು ಹೋಗಬೇಕಾದವರು, ಮಸಣಕ್ಕೆ ಕರೆದುಕೊಂಡು ಹೋಗಬೇಕಾದ ಸಂದರ್ಭ ಒದಗಿ ಬಂದಿದ್ದು ದುರಾದೃಷ್ಟ.