IndiaNational

ಮಹಾಭಾರತ ಕಾಲದ ಶಿವಲಿಂಗ ಧ್ವಂಸ: ಆರೋಪಿಯ ಹೇಳಿಕೆ ಕೇಳಿ ಪೋಲಿಸರಿಗೂ ಶಾಕ್..!

ಲಕ್ನೋ: ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಪುರ್ವಾ ಕೋಟವಾಲಿ ಪ್ರದೇಶದ ಬಿಲ್ಲೇಶ್ವರ ಮಹಾದೇವ ದೇವಸ್ಥಾನದ ಶಿವಲಿಂಗವೊಂದನ್ನು ಬುಧವಾರ ಒಡೆದು ಹಾಕಿದ ಘಟನೆ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.

ಶಿವಲಿಂಗದ ಐತಿಹಾಸಿಕ ಮಹತ್ವ:
ಸ್ಥಳೀಯರು ತಿಳಿಸಿಯಂತೆ, ಈ ಶಿವಲಿಂಗ ಮಹಾಭಾರತ ಯುಗದ ಸಮಯದಲ್ಲಿ ಸ್ಥಾಪಿತವಾಗಿದೆ. ದಂತಕಥೆಯ ಪ್ರಕಾರ, ಭಗವಾನ್ ಕೃಷ್ಣ ಮತ್ತು ಅರ್ಜುನ ಹಸ್ತಿನಾಪುರದಿಂದ ಪ್ರಯಾಣಿಸುವಾಗ ಇಲ್ಲಿ ವಿಶ್ರಾಂತಿ ಪಡೆದು ಪೂಜೆ ಸಲ್ಲಿಸಿದ ನಂತರ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಅರ್ಜುನ ಬಾಣದ ಮೂಲಕ ನೀರಿನ ಮೂಲವನ್ನು ಸೃಷ್ಟಿಸಿದ ಘಟನೆಯೂ ಇಲ್ಲಿ ಪ್ರಚಲಿತವಾಗಿದೆ.

ಈ ದೇವಸ್ಥಾನದ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ ಎಂದು ಭಕ್ತರು ನಂಬಿದ್ದಾರೆ.

ಆರೋಪಿಯನ್ನು ಬಂಧಿಸಿದ ಪೊಲೀಸರು:
ಪೊಲೀಸರ ಪ್ರಕಾರ, ಆರೋಪಿಯಾದ ಅವಧೇಶ್ ಕುರ್ಮಿ ತನ್ನ ಪತ್ನಿಯ ದೀರ್ಘಕಾಲದ ಅನಾರೋಗ್ಯದಿಂದಾಗಿ ಮಾನಸಿಕವಾಗಿ ಬಳಲುತ್ತಿದ್ದನು. ಶಿವಲಿಂಗವನ್ನು ಧ್ವಂಸ ಮಾಡಿದ ಆರೋಪವನ್ನು ಪೊಲೀಸರು ಈಗಾಗಲೇ ದೃಢಪಡಿಸಿದ್ದು, ಅವನು ಮತ್ತೊಂದು ಶಿವಲಿಂಗವನ್ನು ಕೂಡ ಹಾನಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸ್ಥಳೀಯರ ಆಕ್ರೋಶ:
ಈ ಘಟನೆ ಭಕ್ತರಲ್ಲಿ ಆಘಾತ ಉಂಟುಮಾಡಿದೆ. ಹಿಂದೂ ಜಾಗರಣ ಮಂಚದ ಅಜಯ್ ತ್ರಿವೇದಿ, “ಈ ಘಟನೆ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿ ಮಾಡಿದೆ,” ಎಂದು ಹೇಳಿಕೆ ನೀಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button