‘ದೇವರು ರುಜು ಮಾಡಿದನು’: ಸಂಪನ್ನಗೊಂಡಿತು ಸಿಂಪಲ್ ಸುನಿ ಸಿನಿಮಾದ ಅದ್ದೂರಿ ಮುಹೂರ್ತ..!
ಬೆಂಗಳೂರು: ‘ದೇವರು ರುಜು ಮಾಡಿದನು’ – ಈ ಕ್ಯಾಚಿ ಟೈಟಲ್ ಈಗಾಗಲೇ ಗಮನ ಸೆಳೆದಿದ್ದು, ನಿರ್ದೇಶಕ ಸಿಂಪಲ್ ಸುನಿ ಹೊಸ ಪ್ರಯತ್ನಕ್ಕಾಗಿ ಸಿದ್ಧರಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಚಿತ್ರದ ಅದ್ಧೂರಿ ಮುಹೂರ್ತ ನೆರವೇರಿತು. ಚಿತ್ರಕ್ಕೆ ಗ್ರೀನ್ ಹೌಸ್ ಮಾಲೀಕರಾದ ವಾಸು ಕ್ಲ್ಯಾಪ್ ಕೊಟ್ಟರೆ, ನಾಯಕ ವೀರಾಜ್ ಅಜ್ಜಿ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.
ಟೀಸರ್ ಭರ್ಜರಿ ರಿಲೀಸ್:
ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಿಳಿದಿದೆ. ಸಂಗೀತದ ಹಿಂದಿರುವ ಕತೆ, ಹಾಗೂ ವೀರಾಜ್, ಕೀರ್ತಿ ಕೃಷ್ಣ ಮತ್ತು ದಿವಿತಾ ರೈನ ಅಚ್ಚುಕಟ್ಟಾದ ಅಭಿನಯದ ಜೊತೆಗೆ, ಅದ್ಭುತ ಕ್ಯಾಮೆರಾ ವರ್ಕ್, ಮನಮೋಹಕ ಟೀಸರ್ ಮೆರಗು ಹೆಚ್ಚಿಸಿದೆ.
ವೀರಾಜ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ:
ಈ ಚಿತ್ರದ ಮೂಲಕ ಯುವ ನಟ ವೀರಾಜ್ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ವೀರಾಜ್ ರಂಗಭೂಮಿ ಕಲಾವಿದನಾಗಿ ಸಾಕಷ್ಟು ಅನುಭವ ಪಡೆದಿದ್ದು, ಸಿನಿಮಾ ರಂಗದತ್ತ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮುಹೂರ್ತದ ಬಳಿಕ ಮಾತನಾಡಿದ ವೀರಾಜ್, “ಇದು ನನ್ನ ಕನಸು ನನಸಾಗುತ್ತಿರುವ ಕ್ಷಣ, ಚಿಕ್ಕಂದಿನಿಂದಲೂ ನಟನಾಗಬೇಕೆಂಬ ಆಸೆ ನನಗಿತ್ತು. ಇಂದು ಆ ಕನಸು ನನಸಾಗಿದೆ” ಎಂದು ಸಂತಸ ಹಂಚಿಕೊಂಡರು.
ಸೃಜನಶೀಲ ತಂಡ:
ಚಿತ್ರದ ನಿರ್ಮಾಪಕರು ಗೋವಿಂದ್ ರಾಜ್ ಸಿಟಿ, ಸಂಗೀತ ಸಂಯೋಜನೆ ಜೆಜೆ, ಜೇಡ್ ಸ್ಯಾಂಡಿ, ಹಾಗೂ ಜೂಡಾ ಸ್ಯಾಂಡಿ ಅವರು ಮಾಡಿದ್ದರೆ, ಸಂತೋಷ್ ರೈ ಪತಾಜೆ ಕ್ಯಾಮೆರಾದ ಮ್ಯಾಜಿಕ್ ತೋರಿಸಿದ್ದಾರೆ.
ಈ ಎಲ್ಲಾ ತಾರೆಗಳು ಸೇರಿ ‘ದೇವರು ರುಜು ಮಾಡಿದನು’ ಸಿನಿಮಾವನ್ನು ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿದ್ದು, ಪ್ರೇಕ್ಷಕರಲ್ಲಿ ಜಿಜ್ಞಾಸೆ ಹೆಚ್ಚಿಸುತ್ತಿದೆ.