CinemaEntertainment

ನಿಶ್ಚಿತಾರ್ಥ ಸಂಭ್ರಮದಲ್ಲಿ ಧನಂಜಯ್ ಮತ್ತು ಧನ್ಯತಾ ಜಾಲಿ!: ಫೆಬ್ರವರಿ 16ಕ್ಕೆ ಹಸೆಮಣೆ ಏರಲು ಸಜ್ಜಾದ ಡಾಲಿ..!

ಹಾಸನ: ಅಭಿಮಾನಿಗಳ ಪ್ರೀತಿಯ ‘ಡಾಲಿ’, ನಟ ಧನಂಜಯ ಅವರ ಮನೆ ಕಾಳೇನಹಳ್ಳಿ, ಅರಸೀಕೆರೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ ಮನೆಮಾಡಿದೆ. ಧನಂಜಯ ಹಾಗೂ ಭಾವಿ ಪತ್ನಿ ಧನ್ಯತಾ ಅವರ ಲಗ್ನ ಶಾಸ್ತ್ರಗಳು ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಸರಳವಾಗಿ ನಡೆದಿವೆ.

ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಮದುವೆ:
2025ರ ಫೆಬ್ರವರಿ 16ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ಸ್ಥಳವಾಗಿ ಐತಿಹಾಸಿಕ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ಆಯ್ಕೆ ಮಾಡಲಾಗಿದೆ. ಸ್ಯಾಂಡಲ್ ವುಡ್‌ನ ಖ್ಯಾತ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅನೇಕ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.

ನಟ ಡಾಲಿ ಮನೆಯಲ್ಲಿ ಹಬ್ಬದ ವಾತಾವರಣ:
ನಿಶ್ಚಿತಾರ್ಥದ ಸಂಭ್ರಮದೊಂದಿಗೆ, ಲಗ್ನಪತ್ರಿಕೆ ಬರೆಸುವ ಶಾಸ್ತ್ರವೂ ನೆರವೇರಿತು. ಧನಂಜಯ ಅವರು ಕುಟುಂಬದೊಂದಿಗೆ ತವರು ಊರಿನಲ್ಲಿ ಈ ಸಂದರ್ಭವನ್ನು ಖುಷಿಯಾಗಿ ಆಚರಿಸಿದರು. ಈ ವೇಳೆ ಅವರ ಬೆಂಬಲಿಗರು, ಊರಿನ ಜನರು, ಕುಟುಂಬ ಸದಸ್ಯರು ಸಂಭ್ರಮದಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.

ಅಭಿಮಾನಿಗಳ ಕಾತರ:
ಡಾಲಿ ಧನಂಜಯ ಅವರ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮದುವೆ ದಿನಾಂಕದ ವೇಳಾಪಟ್ಟಿ, ಅತಿಥಿಗಳ ಪಟ್ಟಿ ಹಾಗೂ ಇನ್ನಿತರ ವಿಶೇಷಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button