ಶಾಸಕ ಪ್ರದೀಪ್ ಈಶ್ವರ್‌ಗೆ ಕಬ್ಬಿಣ ಕೊಡಲು ಹೇಳಿದರೆ ಖಾದರ್?!
ಬೆಂಗಳೂರು: ವಿಧಾನಸಭೆಯ ಕಲಾಪ ಇಂದು ಪ್ರಾರಂಭವಾಗಿ, ಮತ್ತೆ ವಿರೋಧ ಪಕ್ಷಗಳು ಸದನದ ಬಾವಿಗೆ ಧುಮುಕಿ ಸರ್ಕಾರ ಹಗರಣಗಳ ವಿರುದ್ಧ ಪ್ರತಿಭಟಿಸಲು ಆರಂಭಿಸಿದರು. ಈ ವೇಳೆ ಗದ್ದಲ ಗಲಾಟೆ ಸಾಮಾನ್ಯವಾಗಿ ಉಂಟಾಯಿತು. ಇದೇ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ಗೆ ಕಬ್ಬಿಣ ಕೊಡಿ ಎಂದು ಸಭಾಪತಿ ಯು.ಟಿ.ಖಾದರ್ ಹೇಳಿದರು. ಯಾಕೆ ಹೀಗೆ ಹೇಳಿದರು ಖಾದರ್?
ವಿರೋಧ ಪಕ್ಷಗಳು ಸದನದ ಬಾವಿಯಲ್ಲಿ ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗುವ ವೇಳೆ, ವಿರೋಧ ಪಕ್ಷಗಳ ಈ ನಡೆಗೆ ಟೀಕೆ ಮಾಡಿ, ಪ್ರದೀಪ್ ಈಶ್ವರ್ ಪ್ರತಿ ಘೋಷಣೆ ಕೂಗಬೇಕಾದರೆ, ಖಾದರ್ ಅವರು ಸಭೆಯ ಘನತೆಯನ್ನು ಉಳಿಸಿಕೊಳ್ಳಲು ಪ್ರದೀಪ್ ಈಶ್ವರ್‌ಗೆ ತಮ್ಮ ಸ್ಥಾನದಲ್ಲಿ ಕೂರುವ ಆದೇಶಿಸಿದರು. ಆದರೆ ಸಭಾಪತಿಗಳ ಮಾತನ್ನು ಕೇಳದೆ, ತಮ್ಮ ಕೂಗಾಟವನ್ನು ಪ್ರದೀಪ್ ಅವರು ಮುಂದುವರೆಸಿದರು. ಎಷ್ಟು ಹೇಳಿದರೂ ಕೇಳದ ಪ್ರದೀಪ್ ಈಶ್ವರ್‌ಗೆ ಬೇಸತ್ತು ಕಬ್ಬಿಣ ಕೊಡಿ ಎಂದು ಹಾಸ್ಯಾಸ್ಪದ ರೀತಿಯಲ್ಲಿ ಖಾದರ್ ಗದರಿದರು.
ತದನಂತರ ಕಾಂಗ್ರೆಸ್ ಪಕ್ಷದ ಇತರ ಶಾಸಕರು ಪ್ರದೀಪ್ ಈಶ್ವರ್‌ಗೆ ಬುದ್ಧಿವಾದ ಹೇಳಿ, ಸಭಾಪತಿಗಳ ಮಾತಿಗೆ ಮನ್ನಣೆ ನೀಡುವಂತೆ ಮನವೊಲಿಸಿ ಪ್ರದೀಪ್ ಈಶ್ವರ್ ಅವರನ್ನು ಕೂರುವಂತೆ ಮಾಡಿದರು.