ವಿಜಯನಗರದ ಸಹಕಾರ ಬ್ಯಾಂಕ್‌ನಲ್ಲಿ ಡಿಜಿಟಲ್ ದರೋಡೆ: ₹2.34 ಕೋಟಿ ಒಂದೇ ಕ್ಷಣಕ್ಕೆ ಮಾಯ!

ವಿಜಯನಗರ: ಸೈಬರ್ ಅಪರಾಧಿಗಳ ತಂಡವು ವಿಜಯನಗರದಲ್ಲಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (BDCC) ನಿಂದ ₹2.34 ಕೋಟಿ ಮೊತ್ತವನ್ನು ಡಿಜಿಟಲ್ ದರೋಡೆ ಮೂಲಕ ದೋಚಿದ್ದಾರೆ. ಬ್ಯಾಂಕ್‌ಗಳ ವಿವಿಧ ಶಾಖೆಗಳಲ್ಲಿ ಗ್ರಾಹಕರ ಖಾತೆಗೆ ಹಣ ಜಮಾ ಆಗದೇ ಇರುವ ಬಗ್ಗೆ ದೂರುಗಳು ಬಂದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಅಪರಾಧಿಗಳು ಬ್ಯಾಂಕ್‌ನ RTGS/NEFT ವಹಿವಾಟಿನ ವ್ಯವಸ್ಥೆಯನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಂತೆ, ಜನವರಿ 10, 2025ರಂದು BDCC ಬ್ಯಾಂಕ್‌ನಿಂದ IDBI ಬ್ಯಾಂಕ್‌ಗೆ ಹಣ ವರ್ಗಾವಣೆಯ ಸಮಯದಲ್ಲಿ XML ಫೈಲ್‌ಗಳಲ್ಲಿ ಖಾತೆ ಸಂಖ್ಯೆ ಮತ್ತು IFSC ಕೋಡ್ಗಳನ್ನು ತಿದ್ದುಪಡಿ ಮಾಡುವ ಮೂಲಕ ಅಪರಾಧ ಮಾಡಲಾಗಿದೆ.
ಈ ದರೋಡೆಯ ಮೂಲಕ ಸೈಬರ್ ಅಪರಾಧಿಗಳು ₹2.34 ಕೋಟಿ ಮೊತ್ತವನ್ನು ಉತ್ತರ ಭಾರತದ 25 ನಕಲಿ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಸಂಬಂಧಿತ ಅಧಿಕಾರಿಗಳು ತಕ್ಷಣವೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. “ಇದು ಆಧುನಿಕ ಸೈಬರ್ ತಂತ್ರಜ್ಞಾನದ ಮೂಲಕ ಹಣಕಾಸು ವ್ಯವಸ್ಥೆಗೆ ಒಡ್ಡಿದ ದೊಡ್ಡ ಸವಾಲು. ಆರೋಪಿಗಳನ್ನು ಪತ್ತೆ ಹಚ್ಚಲು ತಕ್ಷಣ ಕ್ರಮ ಕೈಗೊಳ್ಳಲಾಗಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಈ ಘಟನೆ ರಾಜ್ಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರತಾ ಸವಾಲುಗಳನ್ನು ಎತ್ತಿ ತೋರಿಸಿದ್ದು, ಡಿಜಿಟಲ್ ಭದ್ರತೆ ಮೇಲಿನ ಚರ್ಚೆಗೆ ಕಾರಣವಾಗಿದೆ.