Bengaluru
ಶಿವಣ್ಣನನ್ನು ಭೇಟಿಯಾದ ಡಿಕೆ ಶಿವಕುಮಾರ್: ಶಸ್ತ್ರಚಿಕಿತ್ಸೆಯ ನಂತರ ಡಿಕೆ ಮೊದಲ ಭೇಟಿ!

ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ ಯಶಸ್ವಿಯಾಗಿ ಗುಣಮುಖರಾಗಿ ಬೆಂಗಳೂರುಗೆ ಮರಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಾಯ್ಡು ಕಾಲೇಜ್ ರಸ್ತೆಯ ವೈದೇಹಿ ಆಸ್ಪತ್ರೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಿವಣ್ಣನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಡಿಕೆಶಿ ಹೇಳಿದ್ದೇನು?!
ಡಿಕೆ ಶಿವಕುಮಾರ್ ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು,
“ಇತ್ತೀಚೆಗೆ ಅಮೆರಿಕದಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡ ಬಂದ ನಮ್ಮ ಪ್ರಿಯ ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ವಿಚಾರಿಸಲು ಇಂದು ವೈದೇಹಿ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು ಸಂತೋಷವಾಯಿತು.” ಎಂದು ಬರೆದಿದ್ದಾರೆ.
ಶಿವಣ್ಣನಿಗೆ ಸಿಎಂ ಸಿದ್ದರಾಮಯ್ಯ ಭೇಟಿ!
ಶಿವಣ್ಣನ ನಾಗವಾರದ ನಿವಾಸಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೂ ಗಮನ ಸೆಳೆದಿದೆ. ರಾಜಕೀಯ ಮತ್ತು ಸಿನಿ ಕ್ಷೇತ್ರದ ಅನೇಕ ಗಣ್ಯರು ಶಿವಣ್ಣನ ಆರೋಗ್ಯ ಕುರಿತು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.