ಕಾಂಗ್ರೆಸ್ ಬಿಡ್ತಾರಾ ಅನ್ನೋ ಪ್ರಶ್ನೆಗೆ ತೆರೆ ಎಳೆದ ಡಿಕೆಶಿ…!

ಶಿವರಾತ್ರಿ ಹಿನ್ನೆಲೆಯಲ್ಲಿ ಈಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿದ್ದು ಕಾಂಗ್ರೆಸ್ ಬಣದಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿತ್ತು. ಡಿಕೆ ಶಿವಕುಮಾರ್ ಶಿವರಾತ್ರಿಯ ಪ್ರಯುಕ್ತ ಈಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದು ಗೃಹ ಸಚಿವ ಅಮಿತ್ ಶಾ ಜೊತೆಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಹಾಗೆ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾಯಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯ ಬದಲಾವಣೆ ಇಲ್ಲ ಅನ್ನುವಂತಹ ಕೂಗು ಸಹ ಕೇಳಿ ಬರ್ತಾ ಇತ್ತು. ಈ ವಿಚಾರವಾಗಿ ಡಿಕೆಶಿ ಬೇಸರಗೊಂಡು ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಮುಖ ಮಾಡ್ತಾರ ಅನ್ನುವಂತಹ ಪ್ರಶ್ನೆ ಉದ್ಭವವಾಗಿತ್ತು ಅದಕ್ಕೆ ಈಗ ಡಿಕೆಶಿ ತೆರೆ ಎಳೆದಿದ್ದಾರೆ.

ನಿನ್ನೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳದಲ್ಲಿ ಮಾತನಾಡಿದ ಅವರು “ಈಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ವೈಯಕ್ತಿಕ ವಿಚಾರ, ನನಗೆ ಬಿಜೆಪಿಯ ಸ್ವಾಗತವು ಬೇಡ ಕಾಂಗ್ರೆಸ್ ಸ್ವಾಗತವು ಬೇಡ. ನನ್ನ ನಂಬಿಕೆ ಇದ್ದ ಕಡೆ ನಾನು ಹೋಗುತ್ತೇನೆ ನನಗೆ ಎಲ್ಲಿ ಒಳ್ಳೆಯದಾಗುತ್ತದೆ ಎಂದು ಅನಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ. ನನ್ನ ಕ್ಷೇತ್ರದಲ್ಲಿ ನನಗೆ ಮತ ಹಾಕಿರುವವರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹೆಚ್ಚಾಗಿದ್ದಾರೆ ಹಾಗೆ ನನ್ನ ಕ್ಷೇತ್ರದಲ್ಲಿ ಶೇಕಡ 99 ರಷ್ಟು ಬ್ರಾಹ್ಮಣ ಸಮುದಾಯದವರು ನನಗೆ ಮತ ಹಾಕುತ್ತಾರೆ. ಹೀಗಾಗಿ ಬ್ರಾಹ್ಮಣರು ಎಲ್ಲರೂ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಹೇಳಲು ಸಾಧ್ಯವೇ? ನಾನು ಎಂದಿಗೂ ಜಾತಿ ಮೇಲೆ ರಾಜಕಾರಣ ಮಾಡುವವನಲ್ಲ ನೀತಿ ಮೇಲೆ ರಾಜಕಾರಣ ಮಾಡುತ್ತೇನೆ. ನಾನು ಕುಂಭ ಮೇಳಕ್ಕೆ ಹೋಗಿರುವುದರ ವಿಚಾರವಾಗಿಯೂ ಕೆಲವರು ಟೀಕೆಗಳನ್ನ ಮಾಡುತ್ತಿದ್ದಾರೆ ಕುಂಭಮೇಳಕ್ಕೂ ಇದಕ್ಕೂ ಏನು ಸಂಬಂಧ ನೀರಿಗೆ ಜಾತಿ ಧರ್ಮ ಇದೆಯಾ? ಗಂಗಾ, ಕಾವೇರಿ, ಯಮುನಾ ನಮ್ಮ ಪವಿತ್ರ ನದಿಗಳು ಇದು ಮೊದಲಿನಿಂದಲೂ ಆಚರಿಸಿಕೊಂಡ ಪದ್ದತಿ ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಧರ್ಮ ನಂಬಿಕೆ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಬೇಡ” ಎಂದು ತಿರುಗೇಟನ್ನ ನೀಡಿದ್ದಾರೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ