ಡಾಲಿ ಧನಂಜಯ್‌ಗೆ ತೆಲುಗು ಇಂಡಸ್ಟ್ರಿಯಲ್ಲಿ ಈಗ ಭಾರೀ ಬೇಡಿಕೆ: ಲಕ್ ತಂದುಕೊಟ್ಟ ಜೀಬ್ರಾ ಚಿತ್ರ..?!
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಅವರಿಗೀಗ ತೆಲುಗು ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಅವರ ನಟನೆಯ ಜೀಬ್ರಾ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿದ್ದು, ಬೆಳ್ಳಿ ಪರದೆ ಮೇಲೆ ಡಾಲಿಯ ಪ್ರದರ್ಶನಕ್ಕೆ ಮೆಚ್ಚುಗೆಗಳು ಬರುತ್ತಿದೆ. ಡಾನ್ ಪಾತ್ರದಲ್ಲಿ ಡಾಲಿ ಶ್ರೇಷ್ಟ ನಟನೆ, ಅದ್ಬುತ ಡೈಲಾಗ್ ಡೆಲಿವರಿ, ಮತ್ತು ಅವರ ಸ್ಟೈಲ್‌ಗೆ ಪ್ರೇಕ್ಷಕರು ಮೆಚ್ಚಿದ್ದಾರೆ.
ಜೀಬ್ರಾ ಹಿಟ್: ಡಾಲಿಗೆ ಬಿಗ್ ಬ್ಯಾನರ್‌ಗಳಿಂದ ಆಫರ್‌ಗಳು!
ಜೀಬ್ರಾ ಸಕ್ಸಸ್ ಆಗುತ್ತಿದ್ದಂತೆಯೇ ಧನಂಜಯ ಅವರಿಗೆ ತೆಲುಗಿನ ಟಾಪ್ ಪ್ರೊಡಕ್ಷನ್ ಹೌಸ್‌ಗಳಾದ ಪೀಪಲ್ ಮೀಡಿಯಾ ಫ್ಯಾಕ್ಟರಿ, ಹಯಾಗ್ರೀವ ಕ್ರಿಯೇಷನ್, ಸತ್ಯ ಜ್ಯೋತಿ ಫಿಲ್ಮ್ಸ್ ಮೊದಲಾದ ಸಂಸ್ಥೆಗಳಿಂದ ಹೀರೋ ಪಾತ್ರಗಳಿಗೆ ಆಫರ್‌ಗಳು ಬರುತ್ತಿವೆ. ಪ್ರಸ್ತುತ, ಈ ಸಂಸ್ಥೆಗಳು ಡಾಲಿಯ ಕಾಲ್‌ಶೀಟ್‌ಗಾಗಿ ಕಾದು ಕುಳಿತಿವೆ.
ಚಿರಂಜೀವಿ ಹೇಳಿದ್ದೇನು?
ಜೀಬ್ರಾ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ, “ಧನಂಜಯ ತೆಲುಗು ಚಿತ್ರರಂಗದಲ್ಲಿ ಮುಂದಿನ ಸ್ಟಾರ್ ಆಗುತ್ತಾರೆ” ಎಂದು ಭವಿಷ್ಯ ನುಡಿದಿದ್ದರು. ಈಗ ಆ ಮಾತು ನಿಜವಾಗುತ್ತಿದೆಯೇನೋ ಅನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಡಾಲಿಯ ಮುಂದಿನ ಹಾದಿ ಏನು?
ಅಭಿಮಾನಿಗಳು ಮಾತ್ರವಲ್ಲ, ನಿರ್ಮಾಪಕರು ಮತ್ತು ನಿರ್ದೇಶಕರು ಕೂಡ ಧನಂಜಯ ಅವರ ಮುಂದಿನ ಹಂತದ ನಿರ್ಧಾರವನ್ನು ಕಾದು ನೋಡುತ್ತಿದ್ದಾರೆ.
ಡಾಲಿ ತೆಲುಗಿನಲ್ಲಿಯೇ ಸೆಟಲ್ ಆಗುತ್ತಾರಾ? ಅಥವಾ ಪ್ಯಾನ್ ಇಂಡಿಯಾ ಹೀರೋ ಆಗಿ ಕನ್ನಡದ ಹೆಮ್ಮೆ ಹೆಚ್ಚಿಸುತ್ತಾರಾ? ನಿಮ್ಮ ಅಭಿಪ್ರಾಯ ಏನು..?!