ವಾಷಿಂಗ್ಟನ್ ಡಿಸಿ: ಡೊನಾಲ್ಡ್ ಜೆ. ಟ್ರಂಪ್, 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ರಾಜ್ಯಗಳನ್ನು ಗೆದ್ದುಕೊಂಡು, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ‘ಅಮೇರಿಕನ್ ಡ್ರೀಮ್’ ಪುನಃಸ್ಥಾಪನೆ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಭರವಸೆ ನೀಡಿದ ಟ್ರಂಪ್, ಎರಡನೇ ಅವಧಿಗೆ ಪೂರ್ಣ ಪ್ರಮಾಣದಲ್ಲಿ ಹೆಜ್ಜೆ ಹಾಕಿದ್ದಾರೆ.
ಅಭೂತಪೂರ್ವ ಬೆಂಬಲದಿಂದ ಗೆಲುವು:
ಟ್ರಂಪ್ಗೆ ಖ್ಯಾತ ಉದ್ಯಮಿಯಾದ ಎಲೋನ್ ಮಸ್ಕ್ ನ ಬೆಂಬಲವು ಮುಖ್ಯ ತಳಹದಿಯಾಗಿ ನಿಂತಿದ್ದು, ಈ ಬಾರಿಯ ಚುನಾವಣೆಯಲ್ಲಿ ಟ್ರಂಪ್ ವಿಜಯ ಸಾಧಿಸಿದ್ದಾರೆ. 2020ರಲ್ಲಿ ತಮ್ಮ ಹುದ್ದೆ ಕಳೆದುಕೊಂಡ ನಂತರ, ಕಾನೂನು ಚರ್ಚೆಗಳ ನಡುವೆಯೂ ಮತ್ತೆ ರಾಷ್ಟ್ರಪತಿಯಾಗಿ ಗೆದ್ದಿರುವುದು ಅವರ ನಾಯಕತ್ವದ ಸಾಧನೆಯಾಗಿದೆ.
ಅಮೆರಿಕದ ಭವಿಷ್ಯಕ್ಕೆ ಟ್ರಂಪ್ನ ಮಹತ್ವಾಕಾಂಕ್ಷೆಯ ಯೋಜನೆಗಳು:
ಟ್ರಂಪ್ ಅವರ ಅವಧಿಯ ಮೊದಲ ನಿಲುವು ಅತಿ ದೊಡ್ಡ ನಿರ್ಗಮನ ಕಾರ್ಯಾಚರಣೆ ಮತ್ತು ಇಸ್ಲಾಂ ವಿರೋಧಿ ನಿಲುವು, ಎಲ್ಲಾ ಆಮದು ಸರಕುಗಳಿಗೆ ತೆರಿಗೆ ನಿಗದಿ ಮತ್ತು ಫ್ರೀಡಂ ಸಿಟೀಸ್ ನಿರ್ಮಾಣ ಸೇರಿದಂತೆ ಕೆಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.
ವಿದೇಶೀ ನೀತಿಗಳಲ್ಲಿ ಪ್ರಾಮುಖ್ಯತೆ:
ರಷ್ಯಾ-ಯುಕ್ರೇನ್ ಯುದ್ಧ ಅಂತ್ಯಗೊಳಿಸುವ ಭರವಸೆ ನೀಡಿರುವ ಟ್ರಂಪ್, ಇಸ್ರೇಲ್-ಹಮಾಸ್ ಸಂಘರ್ಷದ ನಿರ್ಧಾರಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಶೀಘ್ರವಾಗಿ ಮುಗಿಸಲು ಕೋರಿದ ಅವರು, ಅಮೆರಿಕಾದ ಜನರಕುತೂಹಲವನ್ನು ಹೆಚ್ಚಿಸುವಂತಹ ಹಲವಾರು ರಾಜಕೀಯ ಘೋಷಣೆಗಳನ್ನು ಮಾಡಿದ್ದರು.
ಟ್ರಂಪ್ ಅವರ ಮತ್ತೊಂದು ಆಡಳಿತ ಅವಧಿಯ ಪ್ರಾರಂಭಕ್ಕೂ ಮುನ್ನವೇ, ಈ ರಾಜಕೀಯ ಪಯಣದ ಕೊನೆ ಹಂತಗಳಲ್ಲಿ ಅವರು ತೋರಿಸಿರುವ ಧೈರ್ಯವು, ಜನಮನವನ್ನೂ ತನ್ನತ್ತ ಸೆಳೆಯುತ್ತಿದೆ.