ಆಸ್ಪತ್ರೆಗೆ ದಾಖಲಾದ ಶಿವರಾಜಕುಮಾರ್.
ಬೆಂಗಳೂರು: ಪತ್ನಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಶಿವಮೊಗ್ಗದಲ್ಲಿ ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ಕಾಲಿಟ್ಟಿರುವ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರು ಇಂದು ಕೊಂಚ ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಯಾದಂತಹ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಧ್ಯಮಗಳಿಗೆ ವರದಿಯಾಗಿದೆ.
ನಿರಂತರ ಪ್ರಚಾರದಿಂದಾಗಿ ಡಾ. ಶಿವರಾಜಕುಮಾರ್ ಅವರು ದಣಿದಿದ್ದಾರೆ. ಅವರಿಗೆ ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ, ಇದು ಕೇವಲ ಜನರಲ್ ಚೆಕಪ್ ಆಗಿದೆ ಎನ್ನಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಸ್ವಂತ ಜಿಲ್ಲೆಯಾದ ಶಿವಮೊಗ್ಗದಿಂದ ಕಣಕ್ಕೆ ಇಳಿದಿರುವ ಅವರ ಪುತ್ರಿಯಾದ ಗೀತಾ ಶಿವರಾಜ್ ಕುಮಾರ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಕಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗನಾದ ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸಲಿದ್ದಾರೆಯೇ? ಬಂಗಾರಪ್ಪನವರ ವರ್ಚಸ್ಸು, ಯಡಿಯೂರಪ್ಪನವರ ಕೋಟೆಯನ್ನು ಕೆಡವಲಿದೆಯೇ? ಎಂದು ಕಾದು ನೋಡಬೇಕಾಗಿದೆ.
ಅಂತೂ ಶಿವಣ್ಣನವರ ಅಭಿಮಾನಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ನೀವು ಚುನಾವಣಾ ರಂಗದಲ್ಲಿ ಅವರನ್ನು ಇನ್ನಷ್ಟು ಕಾಣುವಿರಿ.