BengaluruEntertainment
ಸ್ಯಾಂಡಲ್ವುಡ್‌ನಲ್ಲಿ ಮತ್ತೊಂದು ವಿಚ್ಚೇದನ.
ಬೆಂಗಳೂರು: ಕನ್ನಡ ಚಿತ್ರರಂಗದ ಕರಿ ಚಿರತೆ ಎಂದೇ ಖ್ಯಾತಿ ಪಡೆದಿರುವ ನಟ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ಅವರ ವಿಚ್ಚೇದನ ಪ್ರಕರಣದ ತೀರ್ಪು ಇಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಲಿದೆ.
2018ರಲ್ಲಿ ಈ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿತ್ತು. ಈಗ 2024ರಲ್ಲಿ ತೀರ್ಪು ಹೊರಬರುತ್ತಿದೆ. ನಾಗರತ್ನ ಅವರು ತನಗೆ ಗಂಡ ಬೇಕು ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದರು. ಆದರೆ ವಿಜಯ್ ಮಾತ್ರ ತನಗೆ ವಿಚ್ಛೇದನ ಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದರು. ಇವರು ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದಾರೆ. ಇವರ ಪುತ್ರಿ ಮೋನಿಕಾ ವಿಜಯ್ ಪ್ರಸ್ತುತ ಒಂದು ಚಿತ್ರದ ನಾಯಕ ನಟಿಯಾಗಿ ಕೂಡ ಅಭಿನಯಿಸುತ್ತಿದ್ದಾರೆ.