Alma Corner

ಆರ್ಥಿಕ ಬೆಳವಣಿಗೆಯಲ್ಲಿ ಉತ್ಪಾದನಾ ಕ್ಷೇತ್ರದ ಪ್ರಮುಖ ಪಾತ್ರ…!

ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ವಿಶ್ವದ GDP ಅಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
ಕಳೆದ ವರ್ಷಗಳಲ್ಲಿ , ಭಾರತ ಸರ್ಕಾರ ಚೀನಾಗೆ ಹೋಲಿಸಿದರೆ, ಹೆಚ್ಚು ಹೂಡಿಕೆಗಳನ್ನು ದೇಶಕ್ಕೆ ತರಲು ಪ್ರಯತ್ನಿಸಿದೆ. ಭಾರತ ಸರ್ಕಾರ ದೇಶದಲ್ಲಿ ಉತ್ಪಾದನೆಯನ್ನು ವೃದ್ಧಿಸಲು ತಂತ್ರಜ್ಞಾನ, ಇಂಜಿನಿಯರಿಂಗ್, ಆಟೋಮೊಬೈಲ್ಸ್, ಫಾರ್ಮಾಸ್ಯುಟಿಕಲ್ಸ್ ಮತ್ತು FMCG’s (Fast Moving Consumer Goods) ಉತ್ಪಾದನೆಗೆ ಕೇಂದ್ರವಾಗಿ ಬದಲಾಗಿದೆ. ಸರ್ಕಾರ incentives ಕೊಡುವುದರಿಂದ ಉತ್ಪಾದನೆ ಉದ್ಯಮಗಳ ಅಭಿವೃದ್ಧಿ ಮುಂದುವರೆಯುತ್ತಿದೆ. ಭಾರತದ ರಾಜ್ಯಗಳು ವಿದೇಶಿ ಹೂಡಿಕೆದಾರರಿಂದ ಹೂಡಿಕೆಗಳನ್ನು ಆಕರ್ಷಿಸಲು ಹಾಗೂ ತಮ್ಮ ತಮ್ಮ ರಾಜ್ಯಗಳ ಅಭೃವೃದ್ಧಿಗಾಗಿ ಪೈಪೋಟಿ ನಡೆಸುತ್ತಿವೆ. ಇದಕ್ಕೆ ಕುರಿತು, ಒಂದು ವಿಶೇಷ ಉದಾಹರಣೆಯೆಂದರೆ , ಭಾರತ ಸರ್ಕಾರ 2014ರಲ್ಲಿ ಪ್ರಾರಂಭಿಸಿದ ಮೇಕ್ ಇನ್ ಇಂಡಿಯಾ” (Make in India) ಯೋಜನೆ (2014).


ಈ ಯೋಜನೆಯು ಈ ಅಂಶಗಳನ್ನು ಉತ್ತೇಜಿಸುತ್ತದೆ:-
ಹೂಡಿಕೆಗಳು, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ, IPR ರಕ್ಷಣೆ, ಉತ್ಪಾದನೆ ಮೂಲಸೌಕರ್ಯ ರಚನೆ.
ಸದ್ಯಕ್ಕೆ, ಭಾರತ ತನ್ನ ಉತ್ಪಾದನಾ ವಲಯ ಅಭಿವೃದ್ಧಿಯಲ್ಲಿ ಉತ್ತಮ ಸ್ಥಾನದಲ್ಲಿದೆ. ಹೂಡಿಕೆದಾರರಿಗೆ ಭಾರತದಲ್ಲಿ ಹೇಗೆ ಹೂಡಿಕೆ ಮಾಡಬೇಕು ಎನ್ನುವುದು ತಿಳಿದಿದೆ, ಅದಲ್ಲದೇ, ಭಾರತದಲ್ಲಿ ತನ್ನ ಮುಂದೆ ಬರುವ ಅಪಾಯ ಮತ್ತು ಸವಾಲುಗಳನ್ನು ನಿರ್ವಹಿಸಲು ಕೂಡ ತಿಳಿದಿದೆ. 1990 ರ ಉದಾರೀಕರಣದ (liberalisation) ನಂತರ, ಭಾರತದ ಆರ್ಥಿಕ ಬೆಳವಣಿಗೆ ಸರಾಸರಿ 6% ರಷ್ಟಾಗಿದೆ, ಮತ್ತು ಕಳೆದ ವರ್ಷಗಳಲ್ಲಿ ದೇಶದಲ್ಲಿ ರಾಜಕೀಯ ಸ್ಥಿರತೆ (political stability) ಸಹ ಕಂಡುಬಂದಿದೆ.
ಭಾರತದಲ್ಲಿ ಹೂಡಿಕೆಗಳ ಬಗ್ಗೆ ಬೇರೆ ಬೇರೆ ಪ್ರದೇಶಗಳಲ್ಲಿ ವ್ಯತ್ಯಾಸಗಳಿವೆ. ಉದಾಹರಣೆಗೆ, ಬೆಂಗಳೂರು ತಂತ್ರಜ್ಞಾನ ಹೂಡಿಕೆಗೆ ಕೇಂದ್ರವಾಗಿದೆ, ಇದಕ್ಕೆ ಪೈಪೋಟಿಯಾಗಿ ಹೈದರಾಬಾದ್‌ ಕೂಡ ತಂತ್ರಜ್ಞಾನ ಕೇಂದ್ರ ಆಗೋಕೆ ಪ್ರಯತ್ನಿಸುತ್ತಿದೆ, ಅದಲ್ಲದೇ ಹೈದರಾಬಾದ್‌ನಲ್ಲಿ ನಾನಾ ರೀತಿಯ ವಲಯಗಳು ಹುಟ್ಟು ಬರುತ್ತಿವೆ, ಉದಾಹರಣೆಗೆ ಸೆಮಿ-ಕಂಡಕ್ಟರ್ಸ್‌, ಮೊಬೈಲ್‌-ಉತ್ಪಾದನೆ ಇತ್ಯಾದಿ. ಈ ಪ್ರದೇಶಗಳಲ್ಲಿ, ಮುಂದಿನ 5 ರಿಂದ 10 ವರ್ಷಗಳಲ್ಲಿ ಇನ್ನಷ್ಟು ಆರ್ಥಿಕ ಬೆಳವಣಿಗೆಯನ್ನು ಕಾಣಬಹುದು. ಹೂಡಿಕೆ ಮಾಡಬಹುದಾದ ಕೆಲವು potential ಕ್ಷೇತ್ರಗಳು:

  1. ತಂತ್ರಜ್ಞಾನ
  2. ಉತ್ಪಾದನೆ
  3. ಆಹಾರ ಸಂಸ್ಕರಣೆ
  4. ಫಾರ್ಮಾಸ್ಯುಟಿಕಲ್ಸ್‌
  5. ಆಟೋಮೋಬೈಲ್ಸ್‌
  6. ಟೆಕ್ಸ್‌ಟೈಲ್ಸ್‌
    ಇತ್ತೀಚಿಗೆ ಭಾರತ, ನವೀಕರಿಸಬಹುದಾದ ಇಂಧನಕ್ಕೆ (renewable energy) ಹೆಚ್ಚು ಒತ್ತು ನೀಡುವದರಿಂದ, ಮೂಲಸೌಕರ್ಯ ಯೋಜನೆಗಳಲ್ಲಿ ಸಹ ಬೆಳವಣಿಗೆಯನ್ನು ನೋಡಬಹುದು. ಉದಾಹರಣೆಗೆ ಕಲಬುರಗಿ ಸೋಲಾರ್‌ PV ಪ್ಲಾಂಟ್‌, ಪಾವಗಾಡ ಸೋಲಾರ್‌ ಪಾರ್ಕ್‌ ಇತ್ಯಾದಿ.
    “ease of doing business” ಇಂದ ವಿಶ್ವದಲ್ಲಿ ಭಾರತ ಹೂಡಿಕೆಗಳಿಗೆ ನೆಚ್ಚಿನ ದೇಶವಾಗಿದೆ. ಭಾರತ ಸರ್ಕಾರ ಅನೇಕ ಸುಧಾರಣೆಗಳನ್ನು ಜಾರಿಗೊಳಿಸಿದೆ. ಈ ಸುಧಾರಣೆಗಳು, ಪ್ರಕ್ರಿಯಗಳನ್ನು ಸುಲಭ ಮಾಡುವುದಕ್ಕೆ, ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತಿಜಿಸುವ ಗುರಿ ಹೊಂದಿವೆ. ಕೆಲವು ಸುಧಾರಣೆಗಳು:

  1. ದಿವಾಳಿತನ ಕೋಡ್‌, 2016 (insolvency and bankruptcy code)
  2. ಸರಕು ಮತ್ತು ಸೇವಾ ತೆರಿಗೆಯು (Goods and Service Tax – GST)
  3. ಜನ ವಿಶ್ಚಾಸ ಯೋಜನೆ
  4. ಸ್ಟಾರ್ಟಪ್‌ ಇಂಡಿಯಾ ಯೋಜನೆ
    ಈ ರೀತಿ‌, ಅನೇಕ ಸುಧಾರಣೆಗಳಿಂದ ಭಾರತ ʼಜಾಗತಿಕ ವ್ಯಾಪಾರ ಕೇಂದ್ರʼವಾಗಿದೆ.
    ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆ ಇಂದ production linked incentive scheme, 2020 ಭಾರತದ ಉತ್ಪಾದನೆ ವಲಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಎಲೆಕ್‌ಟ್ರಾನಿಕ್ಸ್‌, ಟಿಲಿಕಾಮ್‌, ಫಾರ್ಮಾಸ್ಯುಟಿಕಲ್ಸ್‌, ಆಟೋಮೋಬೈಲ್ಸ್‌ ಕ್ಷೇತ್ರಗಳಿಗೆ ಈ ಯೋಜನೆಯಿಂದ ಲಾಭವಾಗಿದೆ.
    ಭಾರತದ ಬೆಳವಣಿಗೆ ಕೇವಲ ಆರ್ಥಿಕ ವಿಸ್ತರಣೆ ಬಗ್ಗೆ ಮಾತ್ರವಲ್ಲ, ಸುಸ್ಥಿರ ಅಭಿವೃದ್ಧಿಯನ್ನು (sustainable development) ಸಹ ಅಳವಡಿಸಿಕೊಳ್ಳಬೇಕು. ಇದರ ಅಡಿಯಲ್ಲಿ, ಪಂಚಮ್ರಿತ್‌ ಕ್ರಿಯೆ ಯೋಜನೆ ʼಕ್ಲೈಮೇಟ್‌ ಚೆಂಜ್‌ʼ ಅನ್ನು ನಿಯಂತ್ರಿಸಲು ಅಭಿವೃದ್ಧಿಪಡಿಸಲಾಗಿದೆ.
    ಭಾರತ ಇಂದು ಹೆಚ್ಚಿನ ಮೌಲ್ಯವರ್ಧಿತ ಉತ್ಪಾದನೆ (value-added manufacturing) ಹಾಗೂ ಸಂಶೋಧನೆ ಮತ್ತು ಅಭಿವೃದ್ದಿಯತ್ತ (R‌esearch and Development) ಗಮನಹರಿಸುತ್ತಿದೆ.
    ́ಮೇಕ್‌ ಇನ ಇಂಡಿಯಾʼ ಯೋಜನೆಯು, ದೇಶದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆ ಮೇಲೆ ಭಾರೀ ಪ್ರಭಾವ ಬೀರಿದೆ. ಭಾರತವು ʼಜಾಗತಿಕ ಉತ್ಪಾದನೆ ಕೇಂದ್ರʼವಾಗುವ ಹಾದಿಯಲ್ಲಿದೆ. ಈ ಸಂಯೋಜಿತ ಪ್ರಯತ್ನಗಳಿಂದ ಭಾರತವು “2047ರ ವೇಳೆಗೆ ಅಭಿವೃದ್ಧಿ ಹೊಂದಿದ ಆರ್ಥಿಕತೆʼ ದೇಶವಾಗಬಹುದೆಂದು ನಿರೀಕ್ಷೆಯಿದೆ.

ಧನ್ಯಾ ರೆಡ್ಡಿ ಎಸ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button