Politics

ಮೂರನೇ ಬಾರಿ ಈಜಿಪ್ಟಿನ ರಾಷ್ಟ್ರಪತಿಯಾದ ಅಲ್-ಸಿಸಿ.

ಕೈರೋ: ಆಫ್ರಿಕಾ ಖಂಡದಲ್ಲೇ ಐತಿಹಾಸಿಕ ಹಿನ್ನೆಲೆ ಇರುವ ದೇಶವೆಂದರೆ ಅದು ಈಜಿಪ್ಟ್. ಕಳೆದ ಎರಡು ಅವಧಿಗಳಿಂದ ಈಜಿಪ್ಟಿನ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ನಡೆಸುತ್ತಿರುವ ಅಬ್ದೇಲ್ ಫತಾಹ್ ಅಲ್-ಸಿಸಿ ಅವರು ಮೂರನೇ ಬಾರಿ ಈಜಿಪ್ಟಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

69 ವರ್ಷದ ಅಲ್ ಸಿಸಿ ಅವರು, 2014ರಿಂದ ಈಜಿಪ್ಟಿನ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. 89.6% ಮತಗಳೊಂದಿಗೆ ವಿಜಯವನ್ನು ಸಾಧಿಸಿರುವ ಇವರು, 2030ರ ತನಕ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ.

ಅಬ್ದೇಲ್ ಫತಾಹ್ ಅಲ್-ಸಿಸಿ ಅವರು 2023ರಲ್ಲಿ ಭಾರತದ ಗಣರಾಜ್ಯೋತ್ಸವ ದಿನದ ಅತಿಥಿಯಾಗಿ ಆಗಮಿಸಿದ್ದರು. ಇವರು ನಮ್ಮ ಗಣರಾಜ್ಯೋತ್ಸವಕ್ಕೆ ಆಗಮಿಸಿದ ಮೊದಲ ಈಜಿಪ್ಟ್ ರಾಷ್ಟ್ರಾಧ್ಯಕ್ಷ ಆಗಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button