ಬೆಂಗಳೂರಿನಲ್ಲಿ ಇಲೆಕ್ಟ್ರಿಕ್ ಬಸ್‌ಗಳ ಸಂಚಾರ: ಡಿಸೆಲ್ ಉಳಿತಾಯ ಮಾಡಲು ಸರ್ಕಾರ ರೂಪಿಸಿದ ಪ್ಲಾನ್ ಏನು?!

ಬೆಂಗಳೂರು: ನಗರದಲ್ಲಿ ಬಿಎಂಟಿಸಿಯು ಇಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದು, 1,027 ಇವಿ ಬಸ್‌ಗಳು ಈಗಾಗಲೇ ರಸ್ತೆಗಿಳಿದಿವೆ. ಬಿಎಂಟಿಸಿಯ ಈ ನಿರ್ಣಯದಿಂದ ನಗರದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿದೆ ಮತ್ತು ಶಬ್ದ ಮಾಲಿನ್ಯವನ್ನು ತಗ್ಗಿಸಲು ಸಹಾಯವಾಗಿದೆ.
ಇವಿ ಬಸ್‌ಗಳ ವ್ಯಾಪ್ತಿಯ ವಿಸ್ತರಣೆ
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಒಂಬತ್ತು ಮೀಟರ್ ಉದ್ದದ 90 ಹವಾನಿಯಂತ್ರಣ ರಹಿತ ಇವಿ ಬಸ್‌ಗಳು ಮೆಟ್ರೋ ಫೀಡರ್ ಸೇವೆ ನೀಡುತ್ತಿವೆ. ಫೇಮ್–2 ಯೋಜನೆಯಡಿಯಲ್ಲಿ 12 ಮೀಟರ್ ಉದ್ದದ 300 ಇವಿ ಬಸ್‌ಗಳು ನಗರ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಫೇಮ್–3 ಯೋಜನೆಯಡಿಯಲ್ಲಿ 637 ಹವಾನಿಯಂತ್ರಣ ರಹಿತ ಇವಿ ಬಸ್‌ಗಳನ್ನು ಪರಿಚಯಿಸಲಾಗಿದೆ.
ಇವಿಯ ಪ್ರಯೋಜನಗಳು:
ಈ ಬಸ್‌ಗಳ ಬಳಕೆಯಿಂದ ಪ್ರತಿದಿನ 51,000 ಲೀಟರ್ ಡಿಸೆಲ್ ಉಳಿತಾಯವಾಗುತ್ತಿದೆ. ಹಳೆ ಡೀಸೆಲ್ ಬಸ್‌ಗಳ ಶಬ್ದ ಮಾಲಿನ್ಯಕ್ಕೂ ಕಡಿವಾಣ ಹಾಕಲು ಇವು ಸಹಕಾರಿಯಾಗಿವೆ. ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ನವೆಂಬರ್ ಅಂತ್ಯದೊಳಗೆ ಇನ್ನೂ 287 ಇವಿ ಬಸ್‌ಗಳನ್ನು ಪರಿಚಯಿಸಲಾಗುವುದು, ಇದರಿಂದ ಇವಿ ಬಸ್‌ಗಳ ಸಂಖ್ಯೆ 760ಕ್ಕೆ ಏರಲಿದೆ.