ಈನಾಡು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಮೋಜಿ ರಾವ್ ಇನ್ನಿಲ್ಲ.

ಹೈದರಾಬಾದ್: ಮಾದ್ಯಮ ಜಗತ್ತಿನ ಹೆಸರಾಂತ ಉದ್ಯಮಿ. ‘ಈ ಟಿವಿ’ ಹಾಗೂ ‘ಈನಾಡು’ ಸಂಸ್ಥೆಯ ಮೂಲಕ ಟಿವಿ ಮಾದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಹಬ್ಬಿಸಿದ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ರಾಮೋಜಿ ರಾವ್ ಅವರು ತಮ್ಮ 87ನೇ ವಯಸ್ಸಿಗೆ, ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ರಮಾದೇವಿ, ಪುತ್ರ ಕಿರಣ್ ಅವರನ್ನು ಅಗಲಿದ್ದಾರೆ.
ತೀವ್ರ ರಕ್ತದೊತ್ತಡ ಹಾಗೂ ಉಸಿರಾಟದ ಸಮಸ್ಯೆಗಳಿಂದ, ಜೂನ್ 05 ರಂದು ರಾಮೋಜಿ ರಾವ್ ಅವರನ್ನು ಹೈದರಾಬಾದಿನಲ್ಲಿ ಇರುವ ಸ್ಟಾರ್ ಹಾಸ್ಪಿಟಲ್ಸ್ ಆಫ್ ನಾನಕ್ರಮ್ಗುಡ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ರಾವ್ ಅವರು ಶನಿವಾರ ಬೆಳಿಗ್ಗೆ 4.50ಕ್ಕೆ ತಮ್ಮ ಕೊನೆಯುಸಿರೆಳೆದರು.
ರಾಮೋಜಿ ರಾವ್ ಅವರು ನವೆಂಬರ್ 16, 1936ರಂದು ಜನಿಸಿದ್ದರು. ಇವರು ತಮ್ಮ ಜೀವಿತಾವಧಿಯಲ್ಲಿ ಬೃಹತ್ ಬ್ಯುಸಿನೆಸ್ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಅವುಗಳೆಂದರೆ, ಮಾರ್ಗದರ್ಶಿ ಚಿಟ್ ಫಂಡ್ಸ್, ಈನಾಡು ತೆಲುಗು ಡೈಲಿ, ಈ ಟಿವಿ ನೆಟ್ವರ್ಕ್ ಆಫ್ ಟೆಲಿವಿಷನ್ ಚಾನೆಲ್ಸ್, ಫಿಲಂ ಪ್ರೊಡಕ್ಷನ್ ಕಂಪನಿ ಆದಂತಹ ಉಷಾ ಕಿರಣ್ ಮೂವೀಸ್, ಹಾಗೂ ಜಗತ್ತಿನ ಅತಿ ದೊಡ್ಡ ಚಲನಚಿತ್ರ ನಿರ್ಮಾಣದ ಸೌಲಭ್ಯ ಹೊಂದಿರುವ ರಾಮೋಜಿ ಫಿಲಂ ಸಿಟಿ ಕೂಡ ಇವರ ಒಡೆತನದ್ದೇ ಆಗಿದೆ.