ಮಾಜಿ ಎಮ್‌ಎಲ್‌ಸಿ ಎಮ್.ಬಿ. ಭಾನುಪ್ರಕಾಶ್ ನಿಧನ.
ಶಿವಮೊಗ್ಗ: ಜಿಲ್ಲೆಯ ಖ್ಯಾತ ವಾಗ್ಮಿಗಳು ಹಾಗೂ ಭಾರತೀಯ ಜನತಾ ಪಕ್ಷದ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಮ್.ಬಿ. ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಇವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರ ಹರಿಕೃಷ್ಣ ಅವರನ್ನು ಅಗಲಿದ್ದಾರೆ.
ಭಾನುಪ್ರಕಾಶ್ ಅವರು ಇಂದು ಶಿವಮೊಗ್ಗ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದ್ದ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಣಕು ಶವಯಾತ್ರೆ, ಹಾಗೂ ರಘುಪತಿ ರಾಘವ ರಾಜಾರಾಮ್ ಭಜನೆಯನ್ನು ಕೂಡ ಭಾನುಪ್ರಕಾಶ್ ಅವರು ಖುದ್ದು ಮಾಡಿದ್ದರು. ಪ್ರತಿಭಟನೆಯಲ್ಲಿ ಭಾನುಪ್ರಕಾಶ್ ಅವರು ಅತಿಯಾದ ಲವಲವಿಕೆಯಿಂದ ಇದ್ದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರತಿಭಟನೆಯ ಕೊನೆಯಲ್ಲಿ ಭಾನುಪ್ರಕಾಶ್ ಅವರು ಕುಸಿದು ಬಿದ್ದಿದ್ದಾರೆ. ತದನಂತರ ಅವರಿಗೆ ನೀರು ಕುಡಿಸಿ ತಕ್ಷಣ ಸಮೀಪದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಸಹ ಅಷ್ಟರೊಳಗೆ ಭಾನುಪ್ರಕಾಶ್ ರವರು ಸಾವನಪ್ಪಿದ್ದರು.