ಮಹಾರಾಷ್ಟ್ರ: ಉದ್ಧವ್ ಸೇನಾ ಅಥವಾ ಟೀಮ್ ಉದ್ಧವ್ ಮುಖಂಡ ಅಭಿಷೇಕ ಘೋಸಲ್ಕರ್ ಇಂದು ಪೇಸ್ ಬುಕ್ ಲೈವ್ ನಲ್ಲಿ ಇದ್ದಾಗಲೇ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಈ ಘಟನೆ ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.
ಅಭಿಷೇಕ ಘೋಸಲ್ಕರ್ ಅವರು ಉದ್ಧವ್ ಠಾಕ್ರೆ ಅವರ ನಾಯಕತ್ವದ ಶಿವಸೇನಾ ಪಕ್ಷದ ಕಾರ್ಯಕರ್ತ ಹಾಗೂ ಮಾಜಿ ಕಾರ್ಪೋರೇಟರ್ ಆಗಿದ್ದರು. ಇವರ ತಂದೆ ವಿನೋದ್ ಘೋಸಲ್ಕರ್ ಕೂಡ ಶಿವಸೇನೆಯ ಮುಖಂಡ ಹಾಗೂ ಮಾಜಿ ಶಾಸಕರಾಗಿದ್ದರು.
ಮಹಾರಾಷ್ಟ್ರ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಭಿಷೇಕ ಘೋಸಲ್ಕರ್ ಅವರು ಮೋರಿಸ್ ನರೋನ್ಹಾ ಅಲಿಯಾಸ್ ಮೋರಿಸ್ ಬಾಯ್ ಜೊತೆ ಇಂದು ಫೆಬ್ರವರಿ 09ರಂದು , ಪೇಸ್ ಬುಕ್ ಲೈವ್ ಸ್ಟ್ರೀಮ್ ಮಾಡಲು ಸೇರಿದ್ದರು. ಲೈವ್ ನಡೆಯುತ್ತಿರುವಾಗ ಹೊರನಡೆದ ಮೋರಿಸ್, ತದನಂತರ ಬಂದು ಅಭಿಷೇಕ ಅವರ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾರೆ. ಇದಾದನಂತರ ತನಗೂ ಗುಂಡಿಟ್ಟುಕೊಂಡು ಮೃತನಾಗಿದ್ದಾನೆ. ಎಂದು ತಿಳಿಸಿದೆ.
ಈ ಕೊಲೆಯ ಹಿಂದಿನ ಉದ್ದೇಶ ಏನು? ಇನ್ನೂ ಇದರ ಹಿಂದೆ ಯಾರ್ಯಾರ ಕೈವಾಡವಿದೆ ಎಂಬುದನ್ನು ಪೋಲಿಸರು ಪತ್ತೆಹಚ್ಚಬೇಕಿದೆ.