Politics
ಬಾಂಗ್ಲಾದೇಶ ಪತನ: ದೇಶದ ಮುಖ್ಯ ನ್ಯಾಯಾಧೀಶರ ರಾಜೀನಾಮೆ!
ಢಾಕಾ: ಬಾಂಗ್ಲಾದೇಶದ ಮುಖ್ಯ ನ್ಯಾಯಾಧೀಶ ಒಬೈದುಲ್ ಹಸನ್ ವಿದ್ಯಾರ್ಥಿಗಳ ಪ್ರತಿಭಟನೆಗಳ ಬೆನ್ನಲ್ಲೆ ರಾಜೀನಾಮೆ ನೀಡಲು ಒಪ್ಪಿದ್ದಾರೆ. ಹಸನ್, ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಸಮರ್ಥಕರೆಂದು ಗುರುತಿಸಲ್ಪಟ್ಟಿದ್ದರು. ಸುಪ್ರೀಂ ಕೋರ್ಟ್ ಆವರಣದ ಸುತ್ತ ಮುತ್ತ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ ಬಳಿಕ, 65 ವರ್ಷದ ಹಸನ್ ರಾಜೀನಾಮೆಗೆ ಒಪ್ಪಿದ್ದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಸನ್ ಸುಪ್ರೀಂ ಕೋರ್ಟ್ ನ ಎಲ್ಲಾ ನ್ಯಾಯಾಧೀಶರೊಂದಿಗೆ ಸಭೆ ನಡೆಸಿ, ನಂತರ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಈ ಬೆಳವಣಿಗೆಯು ಬಾಂಗ್ಲಾದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳ ಸಕ್ರಿಯತೆ ಹಾಗೂ ರಾಜಕೀಯ ಪ್ರಭಾವದ ಕುರಿತು ಚರ್ಚೆ ಮೂಡಿಸಿದೆ.