ನಂದಿನಿಗೆ ಫೆಂಗಲ್ ಶಾಕ್…!

ರಾಜ್ಯದಲ್ಲಿ ಕಳೆದ ಎರಡು- ಮೂರು ದಿನಗಳಿಂದ ಫೆಂಗಲ್ ಸೈಕ್ಲೋನ್ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿದೆ, ಇದರಿಂದ ಎಲ್ಲೆಡೆ ಚಳಿಯ ವಾತಾವರಣ ಸೃಷ್ಟಿಯಾಗಿದೆ ಹಾಗೂ ಹೆಚ್ಚಿನ ಮಳೆಯಾಗಿದೆ. ಕೆಎಮ್‌ಎಫ್ ನಂದಿನಿ ಹಾಲಿಗೂ ಸಹ ಫೆಂಗಲ್ ಸೈಕ್ಲೋನ್‌ನ ಪರಿಣಾಮ ತಟ್ಟಿದೆ, ಇದರಿಂದ ಹಾಲಿನ ಉತ್ಪಾದನೆಯಲ್ಲೂ ಇಳಿಕೆ ಕಂಡುಬಂದಿದ್ದು ಹಾಲಿನ ಮಾರಾಟ ವ್ಯತ್ಯಯಗೊಂಡಿದೆ. ರಾಜ್ಯದಲ್ಲಿ ಕೆಎಮ್‌ಎಫ್ ನಂದಿನಿ ಹಾಲು ಸುಮಾರು 16 ಒಕ್ಕೂಟಗಳಿಂದ ಪೂರೈಕೆಯಾಗುತ್ತಿದ್ದು, ಪ್ರತಿದಿನ 4 ಲಕ್ಷದ 70 ಸಾವಿರ ಲೀಟರ್‌ನಷ್ಟು ಹಾಲು ಉತ್ಪಾದನೆ ಆಗುತ್ತಿತ್ತು, ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ 4 ಲಕ್ಷದ 20 ಸಾವಿರ ಲೀಟರ್‌ನಷ್ಟು ಮಾತ್ರ ಹಾಲು ಸಂಗ್ರಹವಾಗುತ್ತಿದೆ. ಅಂದರೆ ಕಳೆದ ಮೂರ್ನಾಲ್ಕು ದಿನಗಳಿಂದ 2 ಲಕ್ಷ ಲೀಟರ್‌ನಷ್ಟು ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ಇದರಿಂದ ಇನ್ನೂ ಒಂದೆರಡು ದಿನಗಳ ಕಾಲ ಹಾಲಿನ ಉತ್ಪಾದನೆ ಮತ್ತು ಮಾರಾಟದಲ್ಲಿ ವ್ಯತ್ಯಯ ಕಾಣಬಹುದು ಎಂದು ಒಕ್ಕೂಟಗಳು ವರದಿಮಾಡಿವೆ.

“ಮಳೆ ಹಾಗೂ ಚಳಿಯಿಂದಾಗಿ ಒದ್ದೆಯಾದ ಮತ್ತು ತೇವವಿರುವ ಗೋಧಿ ಮತ್ತು ಜೋಳದ ಹುಲ್ಲನ್ನು ಹಸುಗಳು ಸರಿಯಾಗಿ ತಿನ್ನುತ್ತಿಲ್ಲ, ಇದರಿಂದ ಪ್ರತಿದಿನ 50 ಸಾವಿರ ಲೀಟರ್‌ನಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಮತ್ತೆ ಬಿಸಿಲು ಹೆಚ್ಚಾದಾಗ ಹಸುಗಳು ಹುಲ್ಲನ್ನು ತಿನ್ನುತ್ತವೆ, ಆಗ ಹಾಲಿನ ಉತ್ಪಾದನೆ ಯಥಾಸ್ಥಿತಿಗೆ ಮರಳುತ್ತದೆ. ಈ ವ್ಯತ್ಯಾಸದಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ” ಎಂದು ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಗೌಡ ಹೇಳಿಕೆ ನೀಡಿದ್ದಾರೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ