ಹೋಳಿ ಹಬ್ಬದ ಅಚರಣೆಯ ಹಿನ್ನೆಲೆ ತಿಳಿದಿದೆಯಾ..?

ಬಣ್ಣಗಳ ಹಬ್ಬ ಎಂದು ಕರೆಯಲ್ಪಡುವ ಹೋಳಿ ಹಬ್ಬವು ಭಾರತದಲ್ಲಿ ಅತ್ಯಂತ ಸಂತೋಷದಾಯಕ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ, ಇದು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಹೋಳಿಯ ಮೊದಲ ದಿನವನ್ನು ಹೋಲಿಕಾ ದಹನ ನಡೆಯಲಿದ್ದು, ಇದರ ಮರುದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಹೋಳಿ ಹಬ್ಬದ ಮಹತ್ವ :
ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಪ್ರಬಲ ರಾಕ್ಷಸ ರಾಜ ಹಿರಣ್ಯಕಶ್ಯಪುವಿಗೆ ಬ್ರಹ್ಮನಿಂದ ಅಭೇದನೀಯತೆಯ ವರ ಸಿಕ್ಕಿತ್ತು ಅವನನ್ನು ಹಗಲು-ರಾತ್ರಿ, ಒಳಗೆ ಅಥವಾ ಹೊರಗೆ ಅಥವಾ ಯಾವುದೆ ಆಯುಧದಿಂದ ಮನುಷ್ಯ ಅಥವಾ ಯಾವುದೇ ಪ್ರಾಣಿಯಿಂದ ಕೊಲ್ಲಲಾಗುವುದಿಲ್ಲ ಈ ವರ ಸಿಕ್ಕಿದ್ದರಿಂದ ಯಾವುದೇ ಮನುಷ್ಯನಾಗಲಿ ಅಥವಾ ಯಾವುದೇ ಪ್ರಾಣಿಯಾಗಲಿ ಅವನನ್ನು ಕೊಲ್ಲಲು ಸಾಧ್ಯವಾಗಲಿಲ್ಲ, ಹೀಗಾಗಿ ಗರ್ವದಿಂದ ಹಿರಣ್ಯಕಶ್ಯಪು ರಾಜ್ಯ ಭಾರವನ್ನು ನಡೆಸುತ್ತಿದನು. ಮತ್ತು ಅವನು ತನ್ನ ರಾಜ್ಯದ ಜನರಿಂದ ಪೂಜಿಸಲ್ಪಡಬೇಕೆಂದು ಬಯಸುತಿದ್ದ ಮತ್ತು ಭಯದಿಂದ ಎಲ್ಲರೂ ಅವನನ್ನು ದೇವರಂತೆ ಪೂಜಿಸಲು ಕೂಡ ಪ್ರಾರಂಭಿಸಿದರು. ಹಿರಣ್ಯಕಶ್ಯಪು ತನ್ನ ಮಗನು ತನ್ನನ್ನು ದೇವರೆಂದು ಪೂಜಿಸುವಂತೆ ಕೇಳಿಕೊಂಡನು ಆದರೆ ಅವನ ಮಗ ಪ್ರಹ್ಲಾದನು ವಿಷ್ಟುವಿನ ಶ್ರೇಷ್ಠ ಭಕ್ತನಾಗಿದ್ದನು ಆದ್ದರಿಂದ ಅವನು ವಿಷ್ಣುವಿನ ಬದಲಿಗೆ ತನ್ನ ತಂದೆಯನ್ನು ಪೂಜಿಸಲು ನಿರಾಕರಿಸಿದನು, ಆದಕಾರಣ ಹಿರಣ್ಯಕಶ್ಯಪುವಿನ ಆದೇಶಗಳ ನಿರಾಕರಣೆಯಾಯಿತು . ತನ್ನ ಮಗನ ಮೇಲೆ ಕೋಪಗೊಂಡ ಹಿರಣ್ಯಕಶ್ಯಪು ತನ್ನ ಸಹೋದರಿ ಹೋಳಿಕಾಳನ್ನು ತನ್ನ ಮಗ ಪ್ರಹ್ಲಾದನನ್ನು ಕೊಲ್ಲುವಂತೆ ಹೇಳಿದನು, ತಂದೆಯ ಆದೇಶಕ್ಕೆ ಒಪ್ಪಿದ ಹೋಳಿಕಾ ಬ್ರಹ್ಮದೇವನಲ್ಲಿ ಜ್ವಾಲೆ ನಿರೋಧಕ ಬಟ್ಟೆಯನ್ನು ಬೇಡಿದಳು ಅದಕ್ಕೆ ಬ್ರಹ್ಮದೇವನು ಹೋಳಿಕಾಗೆ ಜ್ವಾಲೆ ನಿರೋಧಕ ಬಟ್ಟೆಯನ್ನು ದಯಪಾಲಿಸಿದನು. ಅದನ್ನು ಅವಳು ಧರಿಸಿ ಪ್ರಹ್ಲಾದನ ಪಕ್ಕದಲ್ಲಿ ಚಿತೆಯ ಮೇಲೆ ಕುಳಿತು ಅವನನ್ನು ಕೊಲ್ಲಲು ಪ್ರಯತ್ನಿಸಿದಳು ಆದರೆ ಪ್ರಹ್ಲಾದನು ವಿಷ್ಣುವನ್ನು ಪ್ರಾರ್ಥಿಸಿ ರಕ್ಷಣೆ ಕೋರಿದನು, ಪ್ರಹ್ಲಾದನ ಪ್ರಾರ್ಥನೆಯನ್ನು ಆಲಿಸಿದ ವಿಷ್ಣು ಪ್ರಹ್ಲಾದನ್ನು ಬೆಂಕಿಯಿಂದ ರಕ್ಷಿಸಿದನು ಮತ್ತು ಅದೆ ಬೆಂಕಿಯಲ್ಲಿ ಹೋಳಿಕಾ ಸುಟ್ಟು ಹೋದಳು. ಈ ಕಥೆಯು ದುಷ್ಟಶಕ್ತಿಯ ವಿರುದ್ಧ ಧರ್ಮದ ವಿಜಯವನ್ನು ಸೂಚಿಸುತ್ತದೆ, ಮತ್ತು ಇದು ಹೋಳಿ ಹಬ್ಬದ ಮಹತ್ವವಾಗಿದೆ.

ಭಾರತದ ಅನೇಕ ಭಾಗಗಳಲ್ಲಿ ಬಣ್ಣದ ಹಬ್ಬವಾದ ಹೋಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬವೂ ಬಣ್ಣಗಳಿಂದ ಹಾಗೂ ಸಿಹಿತಿಂಡಿಗಳು, ತಮಾಷೆಯ ವಾತಾವರಣದಿಂದ ತುಂಬಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು, ಮೈಯಲ್ಲ ವರ್ಣರಂಜಿತವಾಗಿ ಆದಿನ ಹೋಳಿ ಹಬ್ಬಕ್ಕೆ ಕಳೆಯನ್ನು ನೀಡುತ್ತದೆ, ಹೋಳಿಯನ್ನು ಭಾರತದ ಪ್ರತಿ ಭಾಗದಲ್ಲೂ ಅದ್ದೂರಿಯಾಗಿ ಅಚರಣೆ ಮಾಡುತ್ತಾರೆ.
ಸಂಗೀತ ಎಸ್
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ