Sports
ವೈರಲ್ ಆಯ್ತು ಫಿಫಾ ಪೋಸ್ಟ್; ಗೋಟ್ ಬಗ್ಗೆ ಏನು ಹೇಳಿತು ಫಿಫಾ?
ನವದೆಹಲಿ: ಫೀಫಾ ವರ್ಡ್‌ಕಫ್ ಮಾಡಿದ ಪೋಸ್ಟ್ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಎರಡು ‘ಗೋಟ್’ ಬಗ್ಗೆ ಬರೆದುಕೊಂಡಿರುವ ಫೀಫಾ ವರ್ಡ್‌ಕಫ್ ಸಾಮಾಜಿಕ ಜಾಲತಾಣದ ಹ್ಯಾಂಡಲ್, ಭಾರತ ಟಿ-20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಅರ್ಜೆಂಟೀನಾ ಪುಟ್ಬಾಲ್ ನಾಯಕ ಹಾಗೂ ಪುಟ್ಬಾಲ್ ಜಗತ್ತಿನ ದಿಗ್ಗಜ ಲಿಯೋನೆಲ್ ಮೆಸ್ಸಿ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ‘ಹಿಟ್ಮ್ ಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ, ಇವರಿಬ್ಬರು ಟ್ರೋಫಿ ತೆಗೆದುಕೊಳ್ಳುವ ದೃಶ್ಯವನ್ನು ಒಂದೇ ಚಿತ್ರದಲ್ಲಿ ಹಾಕಿದ್ದಾರೆ. ಇದರಿಂದ ರೋಹಿತ್ ಶರ್ಮಾ ಅವರ ಹಾಗೂ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಅತೀವ ಆನಂದ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗೆ ಲೈಕ್ ಹಾಗೂ ಕಾಮೆಂಟ್ಗಳ ಮಾಹಾಪುರವೇ ಹರಿದುಬರುತ್ತಿದೆ.
ಫೀಫಾ ಜಗತ್ತಿಗೆ ಕ್ರಿಕೆಟ್ ಜಗತ್ತಿನ ಅನುಭವ ಜೋರಾಗಿಯೇ ತಿಳಿದಿದೆ. ಇದು ಕ್ರಿಕೆಟ್ ಭವಿಷ್ಯಕ್ಕೆ ಕೂಡ ಒಳ್ಳೆಯದು.