ಗುರುದ್ವಾರದಲ್ಲಿ ಯೋಗ ಮಾಡಿದ್ದಕ್ಕಾಗಿ ಎಫ್ಐಆರ್ ದಾಖಲು.

ಅಮೃತ್ ಸರ್: ಪಂಜಾಬ್ ರಾಜ್ಯದ ಅಮೃತ್ ಸರ್ ನಲ್ಲಿ ಇರುವ ಸಿಖ್ ಧರ್ಮದ ಪವಿತ್ರ ಕ್ಷೇತ್ರವಾದ ಗೋಲ್ಡನ್ ಟೆಂಪಲ್ ಮತ್ತೆ ವಿವಾದದ ಸುಳಿಯಲ್ಲಿ ಬಿದ್ದಿದೆ. ಕಳೆದ 21ನೇ ಜೂನ್ ನಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗಿತ್ತು. ಯೋಗ ಯಾವುದೇ ಧರ್ಮ, ಜಾತಿ, ಹಾಗೂ ದೇಶಗಳನ್ನು ಮೀರಿದ, ಉತ್ತಮ ಜೀವನವನ್ನು ಹಾಗೂ ಉತ್ತಮ ಆರೋಗ್ಯವನ್ನು ಪಡೆಯಲು ಇರುವ ಆರೋಗ್ಯಕರ ಹಾದಿಯಾಗಿದೆ.
ಇದೇ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ವಿವಿಧ ಸ್ಥಳಗಳಲ್ಲಿ ವಿವಿಧ ಜನರು, ಯೋಗಾಸನಗಳನ್ನು ಮಾಡುವ ಮೂಲಕ ಆಚರಿಸಿದ್ದಾರೆ. ಅದೇ ರೀತಿಯಾಗಿ ಖ್ಯಾತ ಫ್ಯಾಷನ್ ವಿನ್ಯಾಸಕಿ ಆದಂತಹ ಅರ್ಚನಾ ಮಕ್ವಾನ್ ಅವರು ಕೂಡ ವಿಭಿನ್ನವಾಗಿ ಅಮೃತ್ ಸರ್ ನಲ್ಲಿ ಇರುವ ಗೋಲ್ಡನ್ ಟೆಂಪಲ್ ನಲ್ಲಿ ಯೋಗ ದಿನವನ್ನು ಆಚರಿಸಲು ಮುಂದಾಗಿದ್ದರು. ತಾವು ಮಾಡಿದ ಯೋಗ ಭಂಗಿಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇವರು ಹರಿಬಿಟ್ಟಿದ್ದರು. ಈಗ ಈ ವಿಷಯ ವಿವಾದಕ್ಕೆ ಕಾರಣವಾಗಿದೆ.
ಕೆಲವು ಮೂಲಭೂತ ಸಿಖ್ ಧರ್ಮಿಯರು ಅರ್ಚನಾ ಅವರ ವಿರುದ್ಧ ಪೋಲಿಸರ ಬಳಿ ಪ್ರಕರಣ ದಾಖಲು ಮಾಡಿದ್ದಾರೆ. ಗುರುದ್ವಾರದಲ್ಲಿ ಯೋಗ ಭಂಗಿ ಮಾಡುವ ಮೂಲಕ ಸಿಖ್ ಧರ್ಮದ ನಂಬಿಕೆಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಬಹುಪಾಲು ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮನಸ್ಥಿತಿ ಖಾಲಿಸ್ಥಾನಿಗಳಿಗೆ ಮಾತ್ರ ಬರಲು ಸಾಧ್ಯ ಎಂದು ಹೇಳಿದ್ದಾರೆ.