ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್: ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ…?!
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಂತೆ ಬೆಂಗಳೂರು ನ್ಯಾಯಾಲಯ ಆದೇಶ ನೀಡಿದ್ದು, ಇದು ಚುನಾವಣೆ ಬಾಂಡ್ ಹಗರಣಕ್ಕೆ ಸಂಬಂಧಿಸಿದ ಪಿತೂರಿ ಎಂದು ಆರೋಪಿಸಲಾಗಿದೆ. ಜನಾಧಿಕಾರ ಸಂಘರ್ಷ ಪರಿಷತ್ (JSP) ನ ಅದರ್ಶ್ ಐಯರ್ ಅವರು ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಸಿಎಂ ಸಿದ್ಧರಾಮಯ್ಯ ಕಿಡಿ:
ಕೋರ್ಟ್ ಆದೇಶದ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಅವರು ನಿರ್ಮಲಾ ಸೀತಾರಾಮನ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. “ಸಚಿವರ ವಿರುದ್ಧ ಹಗರಣದ ಆರೋಪ ಕೇಳಿ ಬರುತ್ತಿರುವಾಗ, ಬಿಜೆಪಿ ನಾಯಕರು ಪ್ರತಿಭಟನೆ ಏನೂ ಮಾಡುತ್ತಿಲ್ಲ,” ಎಂದು ಸಿದ್ಧರಾಮಯ್ಯ ಕಟು ವಾಗ್ದಾಳಿ ನಡೆಸಿದರು. “ನ್ಯಾಯಮೂರ್ತಿಗಳು ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆ ನಡೆದರೆ, ಪ್ರಧಾನಿ ನರೇಂದ್ರ ಮೋದಿಯವರೂ ರಾಜೀನಾಮೆ ಕೊಡಬೇಕಾಗುತ್ತದೆ,” ಎಂದು ಹೇಳಿದರು.
ಕುಮಾರಸ್ವಾಮಿ ಪ್ರತಿಕ್ರಿಯೆ:
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿದ್ಧರಾಮಯ್ಯನವರ ವಿರುದ್ಧ ತಿರುಗೇಟು ನೀಡಿದ್ದು, “ಈ ಹಣ ಸೀತಾರಾಮನ್ ಅವರ ಖಾಸಗಿ ಖಾತೆಗೆ ಹೋಗಿತ್ತಾ? ಇಂತಹ ಆರೋಪದ ಆಧಾರದ ಮೇಲೆ ನಾನು ಮತ್ತು ಅವರು ರಾಜೀನಾಮೆ ಮಾಡಬೇಕೆ?” ಎಂದು ಪ್ರಶ್ನಿಸಿದರು.
ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್:
ಚುನಾವಣೆ ಬಾಂಡ್ ಹಗರಣದಲ್ಲಿ ಸೀತಾರಾಮನ್ ಅವರು ಹಣದ ದಂಧೆ ಮಾಡಿದರೆ, ಅವರು ಕಾನೂನಿನ ಕಟು ಪರಿಣಾಮವನ್ನು ಎದುರಿಸಬೇಕು ಎಂದು ಕಾಂಗ್ರೆಸ್ ನಾಯಕ ವಿ.ಗುರುನಾಧಮ್ ಎಚ್ಚರಿಸಿದ್ದಾರೆ.