ನವದೆಹಲಿ: ಇಡೀ ಭಾರತ ಐಪಿಎಲ್ ನಲ್ಲಿ ಮುಳುಗಿರುವ ಸಂದರ್ಭದಲ್ಲಿ, ಸದ್ದಿಲ್ಲದೆ ವೇಟ್ ಲಿಫ್ಟಿಂಗ್ ವಿಶ್ವಕಪ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದು ತಂದಿದ್ದಾರೆ ಬಿಂದ್ಯಾರಾಣಿ ದೇವಿ. ಇವರು ವೇಟ್ ಲಿಫ್ಟಿಂಗ್ ವಿಶ್ವಕಪ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಗೌರವಕ್ಕೆ ಪಾತ್ರರಾಗಿದ್ದಾರೆ.
ಇವರು ಈ ಹಿಂದೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸಹ ಅತ್ಯುತ್ತಮ ಪ್ರದರ್ಶನ ನೀಡಿ, ಬೆಳ್ಳಿಯ ಪದಕವನ್ನು ಕಬಳಿಸಿದ್ದರು. 55 ಕೆ.ಜಿ ವರ್ಗದಲ್ಲಿ ಭಾರ ಎತ್ತಿದ್ದ ದೇವಿಯವರು, ಒಟ್ಟು 196 ಕೆ.ಜಿ ಭಾರವನ್ನು ದೈರ್ಯ ಹಾಗೂ ಆತ್ಮವಿಶ್ವಾಸದಿಂದ ಎತ್ತಿದರು.
25 ವರ್ಷದ ಬಿಂದ್ಯಾರಾಣಿ ದೇವಿ ಅವರು, ಮಣಿಪುರ ರಾಜ್ಯದ ಇಂಫಾಲ್ ನಗರದವರು. ಇವರು 116 ಕೆ.ಜಿ ತೂಕವನ್ನು ಕ್ಲೀನ್ ಮತ್ತು ಜೆರ್ಕ್ ಮೂಲಕ ಎತ್ತಿ, ರಾಷ್ಟ್ರೀಯ ರೆಕಾರ್ಡ್‌ನ್ನು ಮುರಿದಿದ್ದರು.