Blog
‘ಯಾವುದಾದರು ಸ್ಟಾರ್ಟ್ಅಪ್ ಗಳು ಇದನ್ನು ಮಾಡುತ್ತಿದ್ದರೆ, ಅದರಲ್ಲಿ ನಾನು ಹೂಡಿಕೆ ಮಾಡಲು ಸಿದ್ಧನಿದ್ದೇನೆ’.- ಆನಂದ ಮಹಿಂದ್ರ.

ನದಿಗಳನ್ನು ಸ್ವಚ್ಛ ಮಾಡುವ ಸ್ವಾಯತ್ತ ರೋಬೋಟಿನ ಒಂದು ವಿಡಿಯೋ ತುಣುಕನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ, ಮಹಿಂದ್ರ ಗ್ರೂಪಿನ ಚೇರಮನ್ ಆದ ಆನಂದ್ ಮಹೀಂದ್ರಾ ಅವರು ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಈ ರೋಬೋಟ್ ಚೀನಾ ದೇಶದ್ದು ಎಂದು ಕಾಣಿಸುತ್ತದೆ. ಇಂತಹ ರೋಬೋಟ್ ಗಳನ್ನು ಈ ಕ್ಷಣವೇ, ನಮ್ಮ ದೇಶದಲ್ಲಿ ಮಾಡಬೇಕು. ಯಾವುದಾದರು ಸ್ಟಾರ್ಟ್ಅಪ್ ಗಳು ಇದನ್ನು ಮಾಡುತ್ತಿದ್ದರೆ, ಅದರಲ್ಲಿ ನಾನು ಹೂಡಿಕೆ ಮಾಡಲು ಸಿದ್ಧನಿದ್ದೇನೆ’. ಎಂದು ಹೇಳಿದ್ದಾರೆ.
ಭಾರತದ ಜಲ ಮೂಲೆಗಳಲ್ಲಿ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಇಂತಹ ರೋಬೋಟ್ ಗಳ ಅಗತ್ಯವನ್ನು ಮನಗಂಡ ಆನಂದ್ ಮಹೀಂದ್ರಾ ಅವರು ಈ ಹೆಜ್ಜೆಯನ್ನು ಇಟ್ಟಿರುವುದು, ಭಾರತೀಯ ಯುವ ಉದ್ಯಮಿಗಳಿಗೆ ಒಂದು ಪ್ರೋತ್ಸಾಹವಾಗಲಿದೆ.