ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಫಸ್ಟ್ ಹಾಫ್ ಫ್ರೀ’ ಎಂದ ‘ನಾಟ್ ಔಟ್’ ಚಿತ್ರತಂಡ.

ಬೆಂಗಳೂರು: ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಚಿತ್ರತಂಡ ಒಂದು ತಾವು ನಿರ್ಮಿಸಿದ ಚಿತ್ರದ ಮೊದಲಾರ್ಧದ ವೀಕ್ಷಣೆಯನ್ನು ಉಚಿತ ಎಂದು ಘೋಷಿಸಿದೆ. ಹೌದು, ನೀವು ಕೇಳಿದ್ದು ನಿಜ. ತಮ್ಮ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ ‘ನಾಟ್ ಔಟ್’ ಚಿತ್ರತಂಡ ಈ ರೀತಿಯ ವಿನೂತನ ದಾರಿಯನ್ನು ತುಳಿದಿದೆ. ಚಿತ್ರವನ್ನು ವೀಕ್ಷಿಸಲು ಬರುವ ಎಲ್ಲಾ ಜನರಿಗೆ ಚಿತ್ರದ ಮೊದಲಾದ ಉಚಿತ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ಮೊದಲಾದ ಹಿಡಿಸಿದರೆ ಮಾತ್ರ ಕೊನೆಯ ಅರ್ಧಕ್ಕೆ ಹಣ ನೀಡಿ ಪ್ರೇಕ್ಷಕರು ನೋಡಬಹುದು. ಚಿತ್ರ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮುಟ್ಟದಿದ್ದರೆ, ಪ್ರೇಕ್ಷಕರು ಯಾವುದೇ ಹಣ ನೀಡದೆ ಮೊದಲಾರ್ಧದಲ್ಲಿಯೇ ಚಿತ್ರ ಬಿಟ್ಟು ತೆರಳಬಹುದು ಎಂಬ ವಿನೂತನ ನಿರ್ಧಾರವನ್ನು ಮಾದ್ಯಮಗಳಿಗೆ ತಿಳಿಸಿದೆ.
ಸಿನಿಮಾ ಪ್ರಿಯರನ್ನು ಆಕರ್ಷಿಸಲು ಇದೊಂದು ಹೊಸ ಹಾಗೂ ಅಪಾಯಕಾರಿ ದಾರಿಯಾಗಿದೆ. ಚಿತ್ರತಂಡ ಇಷ್ಟೊಂದು ಆತ್ಮವಿಶ್ವಾಸದಿಂದ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎಂದರೆ, ಚಿತ್ರಕ್ಕೆ ಅಚ್ಚುಕಟ್ಟಾದ ಕಥೆ, ಸಂಭಾಷಣೆ, ನೋಡುಗರನ್ನು ಹಿಡಿದು ಇಟ್ಟುಕೊಳ್ಳುವ ಸ್ಕ್ರೀನ್ ಪ್ಲೇಗಳು ಒಳಗೊಂಡಿದೆ ಎಂದು ಅನ್ನಿಸುತ್ತದೆ. ಆದರೆ ಪ್ರೇಕ್ಷಕರನ್ನು ತಮ್ಮ ಕುರ್ಚಿ ಮೇಲೆ ಹಿಡಿದಿಟ್ಟುಕೊಳ್ಳಲು ಶಕ್ತವಾಗದಿದ್ದರೆ, ಚಿತ್ರತಂಡ ಹಣಕಾಸಿನ ಬಹುದೊಡ್ಡ ಏಟನ್ನು ಹೊಂದಬೇಕಾಗುತ್ತದೆ.

ಚಿತ್ರತಂಡದ ಈ ನಿರ್ಧಾರಕ್ಕೆ ಚಿತ್ರಮಂದಿರಗಳ ಮಾಲೀಕರು ಕೂಡ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಪಿವಿಆರ್ ಗಳಂತಹ ಬಹುಪರದೆಯ ಚಿತ್ರಮಂದಿರಗಳಿಂದ ಹಿಡಿದು ಚಿಕ್ಕ ಚಿಕ್ಕ ಚಿತ್ರಮಂದಿರಗಳ ತನಕ ಈ ಮಾರ್ಕೆಟಿಂಗ್ ತಂತ್ರವನ್ನು ಮುಟ್ಟಿಸುವುದು ಚಿತ್ರ ತಂಡದ ಬಹುದೊಡ್ಡ ಕೆಲಸವಾಗಿದೆ. ಈ ತಂತ್ರ ಯಶಸ್ವಿಯಾದರೆ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಲಿದೆ.