ಜಾರ್ಖಂಡ್ ಮಾಜಿ ಸಿಎಂ ಚಂಪಾಯಿ ಸೊರೆನ್ ಬಿಜೆಪಿಗೆ ಸೇರ್ಪಡೆ: ರಾಜೀನಾಮೆ ನೀಡಿ ಕಣ್ಣೀರು ಹಾಕಿದ್ದು ಏಕೆ..?!

ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ದೀರ್ಘಕಾಲದ ನಾಯಕರಾಗಿದ್ದ ಚಂಪಾಯಿ ಸೊರೆನ್ ಅವರು ಶುಕ್ರವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಸೊರೆನ್ ಬಿಜೆಪಿ ಸೇರಿದರು.
ಜೆಎಂಎಂ ಪಕ್ಷ ಸಿದ್ದಾಂತ ತಪ್ಪಿತೇ?
ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವ ಮುನ್ನ, ಸೊರೆನ್ ಅವರು ಜೆಎಂಎಂ ಪಕ್ಷದ ನಾಯಕ ಶಿವು ಸೊರೆನ್ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದು, ಪಕ್ಷವು ತನ್ನ ಆದರ್ಶಗಳಿಂದ ಧೃತಿಗೆಟ್ಟಿರುವುದನ್ನು ಕಂಡು ಅತೀವ ವಿಷಾದ ವ್ಯಕ್ತಪಡಿಸಿದ್ದಾರೆ. “ನಾವು ಅಂದು ಹೋರಾಟ ಮಾಡಿದ ಮೌಲ್ಯಗಳನ್ನು ಈಗಿನ ಜೆಎಂಎಂ ಪಕ್ಷ ಬಿಟ್ಟುಬಿಟ್ಟಿದೆ,” ಎಂದು ಕಣ್ಣೀರು ಹಾಕಿದ್ದಾರೆ.
ಬಿಜೆಪಿಯಲ್ಲಿ ನೂತನ ಪ್ರಾರಂಭ:
ಸೋರೆನ್, ಪಿಟಿಐಗೆ ನೀಡಿದ ಹೇಳಿಕೆಯಲ್ಲಿ, “ದೆಹಲಿ, ಕೊಲ್ಕತ್ತಾದಲ್ಲಿ ಜಾರ್ಖಂಡ್ ಸರ್ಕಾರ ನನ್ನ ಮೇಲೆ ನಿಗಾವಹಿಸಿದ್ದು, ನನ್ನನ್ನು ಬಿಜೆಪಿ ಸೇರಲು ಪ್ರೇರೇಪಿಸಿತು” ಎಂದು ಹೇಳಿಕೆ ನೀಡಿದ್ದಾರೆ.
” ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಉಳಿಸಲು, ಮತ್ತು ಜಾರ್ಖಂಡ್‌ನ ಸಂತಾಲ್ ಪರಗಣಾದಲ್ಲಿ ಅಕ್ರಮ ಪ್ರವೇಶ ತಡೆಯಲು ಬಿಜೆಪಿಗೆ ಮಾತ್ರ ಸಾಧ್ಯ. ಬುಡಕಟ್ಟು ಜನಸಂಖ್ಯೆ ಕಡಿಮೆಯಾಗುತ್ತಿದೆ, ಅದನ್ನು ಉಳಿಸಲು ಬಿಜೆಪಿ ಮೂಲಕ ನನಗೆ ಹೆಚ್ಚಿನ ಅವಕಾಶಗಳು ಇವೆ,” ಎಂದು ಅವರು ಹೇಳಿದ್ದಾರೆ.
“ಕೊಲ್ಹಾನ್ ಟೈಗರ್” ಸೊರೆನ್:
‘ಕೊಲ್ಹಾನ್ ಟೈಗರ್’ ಎಂದು ಪ್ರಸಿದ್ಧರಾಗಿರುವ ಸೊರೆನ್, ಜುಲೈ 3 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತರುವಾಯ ಜುಲೈ 4 ರಂದು ಹೆಮಂತ್ ಸೊರೆನ್ ಅವರು ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಚಂಪಾಯಿ ಸೊರೆನ್ ಅವರ ಬಿಜೆಪಿ ಸೇರ್ಪಡೆ ರಾಜ್ಯ ರಾಜಕಾರಣದಲ್ಲಿ ನೂತನ ಅಧ್ಯಾಯ ಪ್ರಾರಂಭಿಸಿದೆ.
ಸೋರೆನ್ ಅವರ ಈ ನಿರ್ಧಾರ ಮುಂದಿನ ದಿನಗಳಲ್ಲಿ ಏನಾದರೂ ಬದಲಾವಣೆಗಳನ್ನು ತರುವುದೇ? ಎಂಬುದನ್ನು ಕಾದು ನೋಡಬೇಕಾಗಿದೆ.