
ದೆಹಲಿ: ಇಂದು ದೆಹಲಿಯಲ್ಲಿ ಇರುವ ವೀರ ಭೂಮಿಯಲ್ಲಿ ಸ್ಥಾಪಿತವಾಗಿರುವ, ಭಾರತದ ಯುವ ಪ್ರಧಾನಿ ದಿವಂಗತ. ರಾಜೀವ್ ಗಾಂಧಿ ಅವರ ಸಮಾಧಿಗೆ, ಅವರ ಪುಣ್ಯತಿಥಿಯ ಅಂಗವಾಗಿ ಪುತ್ರ ರಾಹುಲ್ ಗಾಂಧಿಯವರು ಪುಷ್ಪ ನಮನಗಳನ್ನು ಸಲ್ಲಿಸಿದರು.
ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರ್‌ನಲ್ಲಿ, ಎಲ್‌ಟಿಟಿಇ ಭಯೋತ್ಪಾದಕರರು ಬಾಂಬ್ ಸ್ಫೋಟಿಸುವ ಮೂಲಕ ಹತ್ಯೆ ಮಾಡಿದ್ದರು. ಈ ಕಹಿ ಘಟನೆಯನ್ನು ನೆನಪಿಸಿಕೊಳ್ಳಲು ಪ್ರತಿ ವರ್ಷ ಈ ದಿನವನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಎಂದು ಸ್ಮರಿಸಲಾಗುತ್ತದೆ.