Politics
ಯೂಟ್ಯೂಬ್‌ನ ಮಾಜಿ ಸಿಇಒ ಸುಸಾನ್ ವೋಜಿಸ್ಕಿ ನಿಧನ!
ವಾಷಿಂಗ್ಟನ್: 56 ವರ್ಷದ ಯೂಟ್ಯೂಬ್‌ನ ಮಾಜಿ ಸಿಇಒ ಸುಸಾನ್ ವೋಜಿಸ್ಕಿ, ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುತ್ತಿದ್ದರು. ವೋಜಿಸ್ಕಿ ಅವರು 1990ರ ದಶಕದಲ್ಲಿ ಗೂಗಲ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು ಮತ್ತು 2014ರಿಂದ 2023ರವರೆಗೆ ಯೂಟ್ಯೂಬ್‌ನ ಸಿಇಒ ಆಗಿದ್ದರು.
ಗೂಗಲ್ ಸಿಇಒ ಸುಂದರ್ ಪಿಚಾಯಿ, ವೋಜಿಸ್ಕಿ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಅವರು ಅಸಾಧಾರಣ ವ್ಯಕ್ತಿಯಾಗಿದ್ದರು” ಎಂದು ಅವರು ಹೇಳಿದರು. ವೋಜಿಸ್ಕಿ ಅವರ ನಾಯಕತ್ವದಲ್ಲಿ ಯೂಟ್ಯೂಬ್ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿತ್ತು.