Sports
ಫ್ರೆಂಚ್ ಓಪನ್ ಗೆದ್ದ ಕಾರ್ಲೋಸ್ ಅಲ್ಕರಾಝ್.

ಪ್ರಾನ್ಸ್: ಟೆನ್ನಿಸ್ ಆಟದ ಪ್ರತಿಷ್ಠಿತ ಪಂದ್ಯಾವಳಿಯಾದ ಫ್ರೆಂಚ್ ಓಪನ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಪ್ರತಿ ವರ್ಷ ನಡೆಯುವ ಈ ಪಂದ್ಯಾವಳಿ ಜಗತ್ತಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಈ ಪಂದ್ಯಾವಳಿಯ ವಿಶೇಷ ಎಂದರೆ, ಇಲ್ಲಿ ಪಂದ್ಯಗಳನ್ನು ಕೆಂಪು ಬಣ್ಣದ ಮಣ್ಣಿನಿಂದ ಕೂಡಿದ ಟೆನ್ನಿಸ್ ಮೈದಾನದಲ್ಲಿ ಆಡಲಾಗುತ್ತದೆ.
2024ರ ಫ್ರೆಂಚ್ ಓಪನ್ ಪಂದ್ಯಾವಳಿಯ ವಿಜೇತರಾಗಿ, ಸ್ಪೇನ್ ದೇಶದ ಕಾರ್ಲೋಸ್ ಅಲ್ಕರಾಝ್ ಹೊರಹೊಮ್ಮಿದ್ದಾರೆ. ಫ್ರೆಂಚ್ ಓಪನ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಕೇವಲ 21 ವರ್ಷ ವಯಸ್ಸಿನವರು. ಇವರು ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಿದರು.