‘ಸ್ವೇಚ್ಛಾ’ ಟ್ರೇಲರ್ ಔಟ್: ತಾಯಿ-ಮಗಳ ಭಾಂದವ್ಯವೇ ಈ ಚಿತ್ರದ ಹೈಲೈಟ್..!

ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾದ ಸ್ವೇಚ್ಛಾ ಚಿತ್ರದ ಟ್ರೈಲರ್ ಅನ್ನು ಡಿ.23ರಂದು ಎಸ್ಆರ್‌ವಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಾಯಿತು.

ಈ ಚಿತ್ರದಲ್ಲಿ ಹೊಸ ಕಲಾವಿದರಿಗೆ ಅವಕಾಶವನ್ನು ನೀಡಲಾಗಿದ್ದು, ಚಿತ್ರದಲ್ಲಿ ನಾಯಕನಾಗಿ ಅಶ್ವಿನ್ ಮತ್ತು ನಾಯಕಿಯಾಗಿ ಕಿರುತೆರೆ ನಟಿಯಾದ ಪವಿತ್ರ ನಾಯಕ್ ಅವರು ಅಭಿನಯಿಸಿದ್ದಾರೆ. ಕೆಆರ್ ಮುರುಹರಿ ರೆಡ್ಡಿ, ಪ್ರಕಾಶ್ ಕುಮಾರ್,ಶ್ರೀ ಲಕ್ಷ್ಮಿ, ಸ್ಪಂದನ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ವೇಚ್ಛಾ ಚಿತ್ರವನ್ನು ಸುರೇಶ್ ರಾಜು ಅವರು ನಿರ್ದೇಶಿಸಿದ್ದು ಸ್ಟಾರ್ ಮುತ್ತನ್ ಮತ್ತು ಕೆಆರ್ ಮೂರಹರಿ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ. ಸುರೇಶ್ ರೆಡ್ಡಿ ಅವರ ಕಥೆ ಇರುವ ಈ ಚಿತ್ರಕ್ಕೆ ಎಸ್ ಸತೀಶ್ ಅವರು ಛಾಯಾಗ್ರಹಣ ನೀಡಿದ್ದಾರೆ. ಇದರ ಜೊತೆಗೆ ಗೌಸ್ ಪೀರ್ ಅವರ ಸಾಹಿತ್ಯವಿದ್ದು, ಲೋಕಿ ತವಸ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರಾದ ಮುರಹರಿ ರೆಡ್ಡಿ ಯವರು” ಸ್ವೇಚ್ಛಾ ಚಿತ್ರ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಹೆಚ್ಚು ಶ್ರಮವನ್ನು ವಹಿಸಿದೆ ನಾನು ಸಹ ಚಿತ್ರದಲ್ಲಿ ಸಣ್ಣ ಪಾತ್ರವನ್ನು ಪಾತ್ರದಲ್ಲಿ ನಟಿಸಿದ್ದು ನನಗೆ ನಟನೆಯ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರೂ ನಟನೆಯ ಬಗ್ಗೆ ಚಿತ್ರತಂಡ ನಟನೆಯ ಬಗ್ಗೆ ತಿಳಿಸಿ ಅವಕಾಶವನ್ನು ನೀಡಿದೆ ಹಾಗಾಗಿ ಚಿತ್ರತಂಡಕ್ಕೆ ಕೃತಜ್ಞತೆಯನ್ನು ತಿಳಿಸುತ್ತೇನೆ” ಎಂದರು.

ನಿರ್ದೇಶಕರಾದ ಸುರೇಶ್ ರಾಜು ಅವರು ಮಾತನಾಡಿ “ಸ್ವೇಚ್ಛಾ ಚಿತ್ರವೂ ಒಂದು ಪ್ರೇಮಕಥೆಯಾಗಿದೆ. ಸ್ವೇಚ್ಛಾ ಎಂದರೆ ಸ್ವಾತಂತ್ರ್ಯ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸುತ್ತಾರೆ. ಮುಖ್ಯವಾಗಿ ಚಿತ್ರದಲ್ಲಿ ಜೀವನದಲ್ಲಿ ಸ್ವಾತಂತ್ರ್ಯವಾಗಿ ಬದುಕುವುದು ಹೇಗೆ ಎಂಬುದೇ ಚಿತ್ರದ ತಿರುಳಾಗಿದೆ. ಈ ಚಿತ್ರವು ಎರಡು ಕಾಲಘಟ್ಟಗಳ ಕಥೆಯನ್ನು ಒಮ್ಮೆಲೇ ಹೇಳುತ್ತದೆ. ಒಂದು ಕಡೆ ತಾಯಿ ಮಗಳ ಪ್ರೀತಿಯನ್ನು ಹೇಳಿದರೆ, ಇನ್ನೊಂದು ಕಡೆ ಪ್ರೇಮ ಕತೆಯನ್ನು ಹೇಳುತ್ತದೆ.ಭಾವನಾತ್ಮಕವಾಗಿ ಕಥೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇವೆ. ಜನವರಿಯಲ್ಲಿ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಎಲ್ಲರೂ ಚಿತ್ರವನ್ನು ನೋಡಿ ಬೆಂಬಲಿಸಬೇಕು” ಎಂದರು.

ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದಂತಹ ಅಶ್ವಿನ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. “ಸ್ವೇಚ್ಛಾ ಚಿತ್ರವು ತಾಯಿ ಮಗಳ ಬಂಧವನ್ನು ತಿಳಿಸಿಕೊಡುವ ಹಾಗೆ ಒಬ್ಬ ಸಾಮಾನ್ಯ ಕೂಲಿ ಕೆಲಸದ ಹುಡುಗನ ಪ್ರೀತಿಯ ಬಗ್ಗೆ ತಿಳಿಸುವಂತಹ ಒಂದು ನಲ್ಮೆಯ ಪ್ರೇಮಕಥೆಯಾಗಿದೆ ಎಂದರು .ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳು ಹಾಗೂ ಐದು ಗೀತೆಗಳಿದ್ದು ರಾಜೇಶ್ ಕೃಷ್ಣನ್, ಅನುರಾಧ ಭಟ್,ಅನುರಾಗ ಹಾಗೂ ಚೇತನ ನಾಯಕ್ ಅವರ ಕಂಠಸಿರಿಯಿಂದ ಹಾಡುಗಳು ಸೊಗಸಾಗಿ ಮೂಡಿ ಬಂದಿವೆ ಎಂದರು. ಇದು ನನ್ನ ಮೊದಲ ಚಿತ್ರ ಎಲ್ಲರೂ ಬೆಂಬಲಿಸಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು”.
ಮುಂದುವರೆದು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದಂತಹ ಬಾಲನಟಿ ಶ್ರೀ ಲಕ್ಷ್ಮಿ ಮಾತನಾಡಿ “ಚಿತ್ರದಲ್ಲಿ ನಾನು ಸ್ವೇಚ್ಛಾ ಎನ್ನುವಂತಹ ಪಾತ್ರವನ್ನು ಮಾಡಿದ್ದು ನಟನೆಯ ಪ್ರತಿಯೊಂದು ಕ್ಷಣವನ್ನು ನಾನು ಜೀವಿಸಿದ್ದೇನೆ.ಇಂತಹ ಅವಕಾಶವನ್ನು ನೀಡಿದ್ದಕ್ಕೆ ಚಿತ್ರತಂಡಕ್ಕೆ ನಾನು ಕೃತಜ್ಞತೆಯನ್ನು ತಿಳಿಸುತ್ತೇನೆ. ಎಲ್ಲರೂ ಚಿತ್ರವನ್ನು ನೋಡಿ ಬೆಂಬಲಿಸಿ ಎಂದರು.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ