BengaluruEntertainmentಅ ಕೀ ಅಭಿಪ್ರಾಯ

ಗೌರೀಶ್ ಅಕ್ಕಿ ಸ್ಟೂಡಿಯೋಗೆ ಈಗ 5 ಲಕ್ಷ ಚಂದಾದಾರರ ಸಂಭ್ರಮ!

ಬೆಂಗಳೂರು: ಕನ್ನಡ ಪತ್ರಿಕಾ ಜಗತ್ತಿನ ಖ್ಯಾತ ನಿರೂಪಕ, ನಟ, ನಿರ್ದೇಶಕ ಶ್ರೀ. ಗೌರೀಶ್ ಅಕ್ಕಿ ಅವರ ಸಾರಥ್ಯದಲ್ಲಿ 2019 ರಲ್ಲಿ ಪ್ರಾರಂಭವಾದ ಗೌರೀಶ್ ಅಕ್ಕಿ ಸ್ಟುಡಿಯೋ ಎಲ್ಲಾ ವಯಸ್ಸಿನ, ಎಲ್ಲಾ ಕ್ಷೇತ್ರಗಳ ವೀಕ್ಷಕರನ್ನು ಸೆಳೆದಿದೆ.

ಐದು ವರ್ಷಗಳ ಸುದೀರ್ಘ ಪಯಣದಲ್ಲಿ ಅಕ್ಕಿ ಅವರ ಚಾನೆಲ್ ಹೇಳದ ವಿಷಯಗಳಿಲ್ಲ, ಸ್ಪರ್ಶಿಸದ ಕ್ಷೇತ್ರಗಳಿಲ್ಲ. ಇವರ ಯೂಟ್ಯೂಬ್ ಚಾನೆಲ್ ಯಶಸ್ಸಿನಲ್ಲಿ ಭಾಗಿಯಾದವರು, ಎಸ್.ಕೆ ಉಮೇಶ್, ಟೈಗರ್ ಅಶೋಕ್ ಕುಮಾರ್, ವಿದ್ವಾನ್ ಜಗದೀಶ ಶರ್ಮಾ ಸಂಪ, ಡಾ. ಭರತ್ ಚಂದ್ರ, ಕೆ. ಪ್ರವೀಣ್ ನಾಯಕ್, ಪಂಡಿತ್ ನಾಗರಾಜ್ ಹವಾಲ್ದಾರ್, ಜೆ. ಬಿ ರಂಗಸ್ವಾಮಿ ಸೇರಿದಂತೆ ಮೊದಲಾದ ಅನೇಕ ಗಣ್ಯರು.

ಗೌರೀಶ್ ಅಕ್ಕಿ ಸ್ಟುಡಿಯೋ ಚಾನೆಲ್‌- ಸಿನೆಮಾ, ಆರೋಗ್ಯ, ರಾಜಕೀಯ, ಹಣಕಾಸು, ಕಾನೂನು, ಶಿಕ್ಷಣ, ಮನಃಶಾಸ್ತ್ರ, ಪುರಾಣ/ ಆಧ್ಯಾತ್ಮಿಕತೆ, ಸಾಹಿತ್ಯ, ಸಂಗೀತ, ಪತ್ರಿಕೋದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ತನ್ನ ಚಾನೆಲ್‌ನಲ್ಲಿ ಪರಿಚಯಿಸಿದೆ. ಈ ಚಾನೆಲ್‌ನಲ್ಲಿ ಪ್ರಸಾರವಾದ ಜನಪ್ರಿಯ ಕಾರ್ಯಕ್ರಮಗಳು ಇಂತಿವೆ.

ಮಹಾಭಾರತದ ರಹಸ್ಯಗಳು-
ವಿದ್ವಾನ್ ಜಗದೀಶ ಶರ್ಮಾ ಸಂಪ ಅವರ ಮುಖ್ಯಭೂಮಿಕೆಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ, ಈಗಾಗಲೇ 300 ಸಂಚಿಕೆಗಳನ್ನು ದಾಟಿ ಮುನ್ನಡೆಯುತ್ತಿದೆ. ಮಹಾಭಾರತದ ಸ್ವಾರಸ್ಯಕರ ಘಟನೆಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸುವ ಈ ಕಾರ್ಯಕ್ರಮ ಈ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಆಫೀಸರ್ ಸರಣಿ –
ನಿವೃತ್ತ ಪೋಲಿಸ್ ಅಧಿಕಾರಿಗಳಾದ ಶ್ರೀ. ಎಸ್. ಕೆ. ಉಮೇಶ್ ಹಾಗೂ ಜೆ. ಬಿ. ರಂಗಸ್ವಾಮಿ ಅವರ ವೃತ್ತಿಜೀವನದಲ್ಲಿ ನಡೆದಂತಹ ರೋಚಕ ಘಟನೆಗಳ ಮಹಾ ಸರಣಿಯೇ ಈ ‘ಆಫೀಸರ್’ ಕಾರ್ಯಕ್ರಮ. ಈ ಸರಣಿಯಲ್ಲಿ ನಿವೃತ್ತ ಎಸಿಪಿ ಟೈಗರ್‌ ಅಶೋಕ್‌ ಕುಮಾರ್‌, ಬಿ.ಕೆ.ಶಿವರಾಂ, ನಿವೃತ್ತ ಡಿವೈಎಸ್‌ಪಿ ಜಿ.ಎನ್‌.ಮೋಹನ್‌ ಮುಂತಾದವರು ಭಾಗವಹಸಿದ್ದಾರೆ.

ದ ಫ್ಯಾಮಿಲಿ ಡಾಕ್ಟರ್ –
ಕೇವಲ ಮನರಂಜನೆಗೆ ಮಾತ್ರ ಒತ್ತು ನೀಡದೆ, ಜನರ ಆರೋಗ್ಯವನ್ನು ಕುರಿತು ಸಹ ತಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ಹೊರತಂದು ಅನೇಕ ವೀಕ್ಷಕರ ಆರೋಗ್ಯ ಸಮಸ್ಯೆಯನ್ನು ನಿವಾರಿಸಿದೆ ಗೌರೀಶ್ ಅಕ್ಕಿ ಸ್ಟೂಡಿಯೋ.

ಕೇವಲ ಐದು ವರ್ಷಗಳಲ್ಲಿ ಐದು ಲಕ್ಷ ಚಂದಾದಾರರನ್ನು ಪಡೆದಿರುವ ಗೌರೀಶ್ ಅಕ್ಕಿ ಸ್ಟುಡಿಯೋ, ಸದಾ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅರ್ಥಪೂರ್ಣ ಹಾಗೂ ವಿಚಾರಯುಕ್ತ ವಿಡಿಯೋಗಳನ್ನು ನೀಡುವುದರಲ್ಲಿ ಮೇಲುಗೈ.

Show More

Leave a Reply

Your email address will not be published. Required fields are marked *

Related Articles

Back to top button