ಗಿರಿ ದಿನೇಶ್ ಹೃದಯಾಘಾತದಿಂದ ನಿಧನ: ಕನ್ನಡ ಚಿತ್ರರಂಗದಲ್ಲಿ ಶೋಕ!

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್! ಹಿರಿಯ ನಟ ದಿನೇಶ್ ಅವರ ಪುತ್ರ ಹಾಗೂ “ನವಗ್ರಹ” ಸಿನಿಮಾದಲ್ಲಿ ಶೆಟ್ಟಿ ಪಾತ್ರದಲ್ಲಿ ಅಭಿನಯಿಸಿದ್ದ ನಟ ಗಿರಿ ದಿನೇಶ್ ಫೆ. 7ರ ಸಂಜೆ ನಿಧನರಾಗಿದ್ದಾರೆ. 45 ವರ್ಷ ವಯಸ್ಸಾಗಿದ್ದ ಗಿರಿ, ಮನೆಯಲ್ಲಿರುವ ವೇಳೆ ದೇವರ ಪೂಜೆಯನ್ನು ಸಲ್ಲಿಸುತಿದ್ದಾಗ ದಿಢೀರ್ ಆಗಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ, ಹೃದಯಾಘಾತದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಗಿರಿ ದಿನೇಶ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಪಾತ್ರಗಳ ಮೂಲಕ ವಿಶೇಷ ಖ್ಯಾತಿ ಗಳಿಸಿದ್ದರು. “ನವಗ್ರಹ” ಚಿತ್ರದಲ್ಲಿ 9 ಖಳನಟರ ಮಕ್ಕಳೊಂದಿಗೆ ನಟಿಸಿದ್ದ ಗಿರಿ, ಶೆಟ್ಟಿ ಪಾತ್ರದಲ್ಲಿ ಪ್ರಖ್ಯಾತರಾಗಿದ್ದರು. 2008 ರಲ್ಲಿ ತೆರೆಕಂಡ ನವಗ್ರಹ ಸಿನಿಮಾ ದೊಡ್ಡ ಹಿಟ್ ಆಗಿ, ಕನ್ನಡ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಚಿತ್ರದ ಪಟ್ಟಿಗೆ ಸೇರಿತ್ತು.
ನಟಿ ಗಿರಿ ದಿನೇಶ್ ನಂತರದಲ್ಲಿ ಚಮ್ಕಾಯ್ಸು ಚಿಂದಿ ಉಡಾಯ್ಸು, ವಜ್ರ ಹೀಗೆ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಆದರೆ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡುದ್ದಿಲ್ಲ. ಇತ್ತೀಚೆಗೆ, ನವಗ್ರಹ ಚಿತ್ರವನ್ನು ರೀರಿಲೀಸ್ ಮಾಡಿದ ನಂತರವೂ, ಗಿರಿ ಮಾಧ್ಯಮದೊಂದಿಗೆ ಸಂಪರ್ಕದಲ್ಲಿರಲಿಲ್ಲ. ಪ್ರತ್ಯೇಕವಾಗಿದ್ದ ಗಿರಿ, ಮದುವೆ ಆಗದೆ ಅಣ್ಣನ ಮನೆಯಲ್ಲೇ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.