ಫೆಬ್ರವರಿ 06ರಂದು ನಡೆದ 37ನೇ ‘ ಸ್ಟಾಪ್ ಟಿಬಿ ಪಾರ್ಟನರ್ಶಿಪ್’ ಸಭೆಯನ್ನು ಉದ್ದೇಶಿಸಿ ಮಾತನಾಡಿದ, ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ಸೂಖ್ ಮಾಂಡವಿಯ ಅವರು “ಜಾಗತಿಕ ಟಿಬಿ ಸಂಭವವು 8.7% ರಷ್ಟು ಕಡಿಮೆಯಾಗಿದೆ, ಆದರೆ ಭಾರತದಲ್ಲಿ ನಾವು 16% ರಷ್ಟು ಕಡಿತವನ್ನು ಮಾಡಿ ತೋರಿಸಲು ಸಾಧ್ಯವಾಗಿದೆ, ಇದು ಜಾಗತಿಕ ಅಂಕಿ ಅಂಶದ ವೇಗಕ್ಕಿಂತ ದ್ವಿಗುಣವಾಗಿದೆ”. ಎಂದು ಹೇಳಿದರು.
2015ರಲ್ಲಿ 1 ಮಿಲಿಯನ್ ಟಿಬಿ ರೋಗದ ಪ್ರಕರಣಗಳು ಭಾರತದಲ್ಲಿ ಕಂಡಿದ್ದವು, 2023ರಲ್ಲಿ ಈ ಸಂಖ್ಯೆ ಕೇವಲ 0.26 ಮಿಲಿಯನ್ ಆಗಿರುತ್ತದೆ ಇದೇ ಸಂದರ್ಭದಲ್ಲಿ ಮಂಡಳಿಯ ಸದಸ್ಯರು ಟಿಬಿಯ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ತಲುಪಲು ಟಿಬಿ ಲಸಿಕೆಯನ್ನು ಪ್ರಾರಂಭಿಸುವಂತೆ ಸಚಿವರು ಒತ್ತಾಯಿಸಿದರು.
ಸ್ಟಾಪ್ ಟಿಬಿ ಪಾರ್ಟನರ್ಶಿಪ್ ನ್ನು ಯುಎನ್ಒಪಿಎಸ್ ಆಯೋಜಿಸುತ್ತದೆ.