ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ: ಖರೀದಿ ಮಾಡಲು ಇದು ಸೂಕ್ತ ಸಮಯವೇ..?!
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿಯ ದರಗಳು ಸತತ ಎರಡನೇ ದಿನವೂ ಇಳಿಕೆಯಾದ ಪರಿಣಾಮ, ಚಿನ್ನಾಭರಣ ಖರೀದಿ ಮಾಡುವವರಿಗೆ ಉತ್ತಮ ಸಮಯ ಎದುರಾಗಿದೆ. ಇಂದು ದೇಶಾದ್ಯಾಂತ ಚಿನ್ನದ ದರವು 1,000 ರೂಪಾಯಿಗಳ ಇಳಿಕೆಯನ್ನು ಕಂಡಿದೆ, ಅಂದರೆ 10 ಗ್ರಾಂ ಚಿನ್ನದ ಬೆಲೆ 77,240 ರೂ.ಗೆ ತಲುಪಿದೆ. ಈ ಎರಡು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆಯು 2,400 ರೂ. ಕಡಿಮೆಯಾದುದು ಗಮನಾರ್ಹವಾಗಿದೆ.
ಇನ್ನು ಬೆಳ್ಳಿಯ ಬೆಲೆ ಕೂಡ 2,000 ರೂ. ಇಳಿಕೆಯಾಗಿದೆ. ಪ್ರತಿ ಕೆ.ಜಿ. ಬೆಳ್ಳಿ ಇದೀಗ ₹89,500 ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಇಳಿಕೆಯು ಭಾರತೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ದೇಶೀಯ ದರದಲ್ಲಿ ಇಳಿಕೆ ಕಂಡುಬಂದಿದೆ.
ಚಿನ್ನದ ಖರೀದಿ ಮಾಡಲು ಇದು ಉತ್ತಮ ಸಮಯ ಎಂದು ಬಂಗಾರ ವ್ಯಾಪಾರಿಗಳು ಹೇಳಿದ್ದಾರೆ. ಏಕಕಾಲದಲ್ಲಿ ಮದುವೆ ಮತ್ತು ಹಬ್ಬಗಳು ಆರಂಭವಾಗಿದ್ದು, ಇದರಿಂದ ಚಿನ್ನ ಖರೀದಿಗೆ ಹೆಚ್ಚಿನ ಬೇಡಿಕೆ ಇರುವುದರ ನಿಟ್ಟಿನಲ್ಲಿ ಇಳಿಕೆಯಾಗಿರುವ ದರ ಗ್ರಾಹಕರಿಗೆ ಅನುಕೂಲವಾಗಿದೆ.
ನವೆಂಬರ್ ತಿಂಗಳ ಆರಂಭದಲ್ಲಿ ಚಿನ್ನದ ದರ ಏರಿಕೆಯಾಗಿದ್ದರೂ, ಈ ತಿಂಗಳ ಕೊನೆಯಲ್ಲಿ ಇಳಿಕೆಯನ್ನು ಕಾಣುವುದರಿಂದ, ಮುಂದಿನ ದಿನಗಳಲ್ಲಿ ಚಿನ್ನದ ದರವು ಮತ್ತಷ್ಟು ಏರಿಕೆಗೆ ಹೋಗಬಹುದು ಎಂದು ತಜ್ಞರು ಸೂಚಿಸಿದ್ದಾರೆ.