ಚಿನ್ನ-ಬೆಳ್ಳಿ ದರ ಇಳಿಕೆ: ಹೂಡಿಕೆದಾರರಿಗೆ ಆಘಾತ ತರಲಿದೆಯೇ ಈ ಬೆಳವಣಿಗೆ..?!

ಬೆಂಗಳೂರು: ಶನಿವಾರ ಚಿನ್ನದ ಮತ್ತು ಬೆಳ್ಳಿಯ ದರದಲ್ಲಿ ಬೃಹತ್ ಇಳಿಕೆ ಕಂಡುಬಂದಿದೆ. ಹೂಡಿಕೆದಾರರು ತೀವ್ರ ಕುತೂಹಲದಿಂದ ಚಿನ್ನ ಮತ್ತು ಬೆಳ್ಳಿ ದರದ ಹಿನ್ನಡೆಗೆ ಇರುವ ಕಾರಣಗಳತ್ತ ಗಮನ ಹರಿಸಿದ್ದಾರೆ.
ಇಂದಿನ ಚಿನ್ನದ ದರ:
24 ಕ್ಯಾರಟ್ ಚಿನ್ನದ ದರ ₹7,903.3 ಪ್ರತಿ ಗ್ರಾಂ, ₹600ರ ಇಳಿಕೆಯನ್ನು ಕಂಡಿದೆ. 22 ಕ್ಯಾರಟ್ ಚಿನ್ನ ₹7,246.3 ಪ್ರತಿ ಗ್ರಾಂ, ₹550 ಇಳಿಕೆಯಾಗಿದ್ದು, ಹೂಡಿಕೆದಾರರಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಒಂದು ವಾರದಲ್ಲಿ 24 ಕ್ಯಾರಟ್ ಚಿನ್ನದ ದರದಲ್ಲಿ -2.34% ಮತ್ತು ಕಳೆದ ತಿಂಗಳಲ್ಲಿ -4.82% ಇಳಿಕೆ ಕಂಡುಬಂದಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ಪ್ರತಿ ಕಿಲೋಗೆ ₹96,500, ₹3,200 ಇಳಿಕೆಯಾಗಿದೆ. ಈ ಬೆಳವಣಿಗೆ ಚಿನ್ನ ಮತ್ತು ಬೆಳ್ಳಿ ವಹಿವಾಟು ತೀವ್ರ ಕುಸಿತದ ಹಾದಿಯಲ್ಲಿ ಸಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಗರಗಳಿಗನುಸಾರ ದರದ ವಿವರ
- ದೆಹಲಿ: ಚಿನ್ನ ₹79,033/10 ಗ್ರಾಂ, ಬೆಳ್ಳಿ ₹96,500/ಕಿಲೋ
- ಚೆನ್ನೈ: ಚಿನ್ನ ₹78,881/10 ಗ್ರಾಂ, ಬೆಳ್ಳಿ ₹1,03,600/ಕಿಲೋ
- ಮುಂಬೈ: ಚಿನ್ನ ₹78,887/10 ಗ್ರಾಂ, ಬೆಳ್ಳಿ ₹95,800/ಕಿಲೋ
- ಕೋಲ್ಕತ್ತಾ: ಚಿನ್ನ ₹78,885/10 ಗ್ರಾಂ, ಬೆಳ್ಳಿ ₹97,300/ಕಿಲೋ
MCX ದರದ ಸ್ಥಿತಿಗತಿ:
ಎಪ್ರಿಲ್ 2025 MCX ಚಿನ್ನದ ಭವಿಷ್ಯ ದರ ₹77,777/10 ಗ್ರಾಂ, ₹1.112 ಇಳಿಕೆ ಕಂಡುಬಂದಿದೆ. ಮೇ 2025 MCX ಬೆಳ್ಳಿ ದರ ₹92,768/ಕಿಲೋ, ₹1.73 ಇಳಿಕೆಯಾಗಿದೆ.
ಚಿನ್ನ-ಬೆಳ್ಳಿಯ ದರದ ಮೇಲೆ ಪ್ರಭಾವ ಬೀರುವ ಅಂಶಗಳು
- ಜಾಗತಿಕ ಚಿನ್ನದ ಬೇಡಿಕೆ: ಚಿನ್ನದ ದರದ ಮೇಲೆ ಗ್ಲೋಬಲ್ ಮಾರುಕಟ್ಟೆ ದೊಡ್ಡ ಪ್ರಭಾವ ಬೀರುತ್ತದೆ.
- ಅಮೆರಿಕನ್ ಡಾಲರ್: ಡಾಲರ್ ಮೌಲ್ಯದ ಹೆಚ್ಚಳ ಅಥವಾ ಕುಸಿತದ ಪರಿಣಾಮ ಚಿನ್ನದ ಮೌಲ್ಯದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ.
- ಬಡ್ಡಿದರ ನಿರ್ಧಾರಗಳು: ಸರ್ಕಾರದ ಹಣಕಾಸು ನೀತಿ ಮತ್ತು ಬಡ್ಡಿದರ ನಿರ್ಧಾರಗಳು ಮೌಲ್ಯ ಧಾತುಗಳ ಬೆಲೆಯಲ್ಲಿ ನೇರ ಪರಿಣಾಮ ಬೀರುತ್ತವೆ.
ಹೂಡಿಕೆದಾರರಿಗೆ ಸಲಹೆ:
ಚಿನ್ನದ ದರ ಇಳಿಕೆ ಹೂಡಿಕೆ ಮಾಡಲು ಸೂಕ್ತ ಅವಕಾಶವಾಗಿದೆ, ಆದರೆ ಚಿನ್ನದ ಜಾಗತಿಕ ದಶೆ ಮತ್ತು ಭವಿಷ್ಯ ದರದ ಊಹೆಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆಗೆ ಮುಂದಾಗುವುದು ಶ್ರೇಯಸ್ಕರ.