Blog

ಈಗ ಐಫೆಲ್ ಟವರ್ ವೀಕ್ಷಿಸಲು ಹೋಗುವ ಭಾರತೀಯರಿಗೆ ಖುಷಿಯ ವಿಷಯ.

ಐಫೆಲ್ ಟವರ್ ವೀಕ್ಷಿಸಲು ಹೋಗುವವರ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಇನ್ನು ಮುಂದೆ ಅಲ್ಲಿ ಪ್ರವಾಸಕ್ಕೆಂದು ಹೊರಡುವ ಭಾರತೀಯರಿಗೆ ಖುಷಿಯ ಸಂಗತಿ ಒಂದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ತಿಳಿಸಿದೆ.

ಇನ್ನು ಮುಂದೆ ಐಫೆಲ್ ಟವರ್ ವೀಕ್ಷಿಸಲು ಹೋಗುವ ಭಾರತೀಯರು ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಮೂಲಕವೂ ಅಲ್ಲಿ ಪಾವತಿ ಮಾಡಬಹುದು. NPCIನ ಅಂಗ ಸಂಸ್ಥೆಯಾದ ಅಂತಾರಾಷ್ಟ್ರೀಯ ಪೇಮೆಂಟ್ (NIPL), ಫ್ರಾನ್ಸ್ ದೇಶದ ಇ-ಕಾಮರ್ಸ್ ಮತ್ತು ಲೈರಾ ಜೊತೆಗೆ ಒಪ್ಪಂದ ಮಾಡಿಕೊಂಡು, ಈ ಸೌಲಭ್ಯವನ್ನು ಭಾರತದ ಗಣರಾಜ್ಯೋತ್ಸವ ದಿನದಂದು ಅಧಿಕೃತವಾಗಿ ಘೋಷಿಸಿದ್ದಾರೆ.

‘ಇದು ಫ್ರಾನ್ಸಿನಲ್ಲಿ ಪ್ರಾರಂಭಗೊಂಡ ಮೊದಲ ಯುಪಿಐ ಪಾವತಿ ತಾಣವಾಗಿದೆ. ಈ ಸೌಲಭ್ಯವನ್ನು ಮುಂದೆ ಐರೋಪ್ಯ ದೇಶಗಳ ಇತರೆ ಪ್ರವಾಸಿ ತಾಣಗಳಿಗೂ ವಿಸ್ತರಿಸಲಾಗುವುದು’ ಎಂದು NIPL ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿತೇಶ್ ಶುಕ್ಲಾ ಹೇಳಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button