CinemaEntertainment

‘ರಂಗನಾಯಕ’ ಚಿತ್ರ ಬಿಡುಗಡೆಗೆ ವಿಘ್ನ ತಂದ ಚೆಕ್ ಬೌನ್ಸ್ ಪ್ರಕರಣ.

ಬೆಂಗಳೂರು: ನಿರ್ದೇಶಕ ಗುರು ಪ್ರಸಾದ್ ನಿರ್ದೇಶನದ ಹಾಗೂ ನವರಸ ನಾಯಕ ಜಗ್ಗೇಶ್ ಅಭಿನಯದ ‘ರಂಗನಾಯಕ’ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ವಿಘ್ನ ಒಂದು ಎದುರಾಗಿದೆ. ಈ ಚಿತ್ರದ ನಿರ್ದೇಶಕರಾದ ಗುರುಪ್ರಸಾದ್ ಅವರು ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಸಿಟಿ ಸಿವಿಲ್ ಕೋರ್ಟಿಗೆ ಶ್ರೀನಿವಾಸ ಮೊರೆ ಹೋಗಿದ್ದಾರೆ. ಈ ಮೂಲಕ ‘ರಂಗನಾಯಕ’ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸಹ ನ್ಯಾಯಾಲಯಕ್ಕೆ ಆಗ್ರಹಿಸಿದ್ದಾರೆ.

ನಿರ್ದೇಶಕ ಗುರುಪ್ರಸಾದ್ ಅವರು 2015-16ರಲ್ಲಿ ನನ್ನ ಬಳಿ 30 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಆದರೆ ತೆಗೆದುಕೊಂಡು ಸಾಲವನ್ನು ಬಹಳ ವರ್ಷಗಳಾದರೂ ಮರುಪಾವತಿ ಮಾಡಿಲ್ಲ. ಸಾಲ ಪಡೆಯುವ ಸಮಯದಲ್ಲಿ ಗುರುಪ್ರಸಾದ್ ಅವರು ಶ್ರೀನಿವಾಸ್ ಅವರಿಗೆ ಮೂರು ಚೆಕ್‌ಗಳನ್ನು ನೀಡಿದ್ದರು. ಆದರೆ ಆ ಚೆಕ್‌ಗಳು ಬೌನ್ಸ್ ಆಗಿವೆ ಎಂದು ಶ್ರೀನಿವಾಸ್ ಪೊಲೀಸರ ಬಳಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತದನಂತರ 21ನೇ ಎಸಿಎಂಎಂ ನ್ಯಾಯಾಲಯವು ಗುರುಪ್ರಸಾದ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಬಂಧನವಾದ ಸಮಯದಲ್ಲಿ ತಾನು ರಂಗನಾಯಕ ಸಿನಿಮಾ ಕೆಲಸದಲ್ಲಿ ತೊಡಗಿದ್ದೇನೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ನಿಮ್ಮ ಹಣವನ್ನು ಮರುಪಾವತಿ ಮಾಡುತ್ತೇನೆ ಎಂದು ಗುರುಪ್ರಸಾದ್ ಅವರು ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಸಹ ಶ್ರೀನಿವಾಸ್ ಅವರಿಗೆ ಗುರುಪ್ರಸಾದ್ ಅವರ ಕಡೆಯಿಂದ ಹಣ ಮರುಪಾವತಿ ಆಗಿಲ್ಲ. ಹಾಗಾಗಿ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಎಂದು ದೂರುದಾರ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button