Politics
ಶಾಸಕರ ‘ಕಿರುನಿದ್ದೆ’ಗೆ ಮೊಗಸಾಲೆಯಲ್ಲಿ ಆರಾಮು ಕುರ್ಚಿ ವ್ಯವಸ್ಥೆ.
ಬೆಂಗಳೂರು: ವಿಧಾನಸಭೆಯ ಕಲಾಪಗಳು ಪ್ರಸ್ತುತ ನಡೆಯುತ್ತಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಹಿತ ಕೆಲ ಶಾಸಕರು ನಿದ್ದೆಗೆ ಜಾರುವ ಪ್ರಸಂಗಗಳು ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ, ಶಾಸಕರು ಮದ್ಯಾಹ್ನ ಊಟ ಸೇವಿಸಿದ ನಂತರ ಕಿರು ನಿದ್ದೆ ಮಾಡಲು ‘ರಿಕ್ಲೈನರ್ ಕುರ್ಚಿ’ ವ್ಯವಸ್ಥೆಯನ್ನು ಸಭಾಪತಿ ಯು.ಟಿ. ಖಾದರ್ ಪರಿಚಯಿಸಿದ್ದಾರೆ.
ಹವಾನಿಯಂತ್ರಿತ ಸದನದಲ್ಲಿ ಚರ್ಚೆ ವೇಳೆ ಹಾಗೂ ಮಧ್ಯಾಹ್ನ ಊಟದ ನಂತರ ಆಕಳಿಕೆ ಹಾಗೂ ತೂಕಡಿಕೆ ಘಟನೆಗಳು ಸಭಾಪತಿಗಳ ಗಮನಕ್ಕೆ ಬಂದಿದೆ. ಕೆಲ ಶಾಸಕರು ಮದ್ಯಾಹ್ನ ಹಾಜರಾಗುವದೇ ಕಡಿಮೆ ಆಗಿದೆ. ಇದರಿಂದ ಸದನದಲ್ಲಿ ಹಾಜರಾತಿ ಸಂಖ್ಯೆ ಕಡಿಮೆ ಆಗುತ್ತಿದೆ. ಹೀಗಾಗಿ ಖಾದರ್ ಅವರು ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಇದರಿಂದ ಶಾಸಕರು ಮದ್ಯಾಹ್ನ ಭೋಜನದ ನಂತರ, ವಿಧಾನಸಭೆಯ ಆವರಣದಲ್ಲೇ ಕಿರು ನಿದ್ದೆ ಮಾಡಿ ಮತ್ತೆ ಸದನದ ಚರ್ಚೆಯಲ್ಲಿ ಭಾಗವಹಿಸಬಹುದು.
ಈ ಪ್ರಾಯೋಗಿಕ ಕ್ರಮವನ್ನು ಸದನದ ಹಾಜರಾತಿಯನ್ನು ಹೆಚ್ಚಿಸುವ ಸಲುವಾಗಿ ತೆಗೆದುಕೊಳ್ಳಲಾಗಿದೆ.