CinemaEntertainment

ಪ್ಯಾನ್‌ ಇಂಡಿಯಾ ಸ್ಟಾರ್‌ ಡಾರ್ಲಿಂಗ್ ಪ್ರಭಾಸ್‌ಗೆ ಹುಟ್ಟು ಹಬ್ಬದ ಸಂಭ್ರಮ!

ಹೈದರಾಬಾದ್: ಟಾಲಿವುಡ್‌ನ ಪ್ಯಾನ್‌ ಇಂಡಿಯಾ ಸ್ಟಾರ್‌ ಪ್ರಭಾಸ್ ಅವರ ಜನ್ಮದಿನ ಅಕ್ಟೋಬರ್ 23 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದವರು ಸಂಭ್ರಮದಲ್ಲಿದ್ದಾರೆ. ಪ್ರಭಾಸ್ ತಮ್ಮ ನಟನೆ ಮೂಲಕ ದೇಶವ್ಯಾಪಿ ಹೆಸರು ಮಾಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ ನಟ ಆಗಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಪ್ರಭಾಸ್‌ ಸಕ್ಸಸ್‌:

  • ಬಾಹುಬಲಿ: ದಿ ಬಿಗಿನಿಂಗ್ ಮೊದಲ ದಿನ ₹75 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು.
  • ಬಾಹುಬಲಿ: ದಿ ಕನ್‌ಕ್ಲೂಷನ್ ₹200 ಕೋಟಿ ಮೊದಲ ದಿನದ ಕಲೆಕ್ಷನ್‌.
  • ಸಾಹೋ: ₹130 ಕೋಟಿ ಮೊದಲ ದಿನದ ಕಲೆಕ್ಷನ್‌.
  • ಕಲ್ಕಿ 2898 AD: ₹180 ಕೋಟಿ ಮೊದಲ ದಿನದ ಕಲೆಕ್ಷನ್‌ ಮಾಡಿತು, ಈ ಚಿತ್ರ ಜಾಗತಿಕ ಮಟ್ಟದಲ್ಲಿ ಪ್ರಭಾಸ್ ಅವರ ಪ್ರಭಾವವನ್ನು ಹೆಚ್ಚಿಸಿದೆ.

ಕಲ್ಕಿ 2898 AD ಚಿತ್ರವು ₹1100 ಕೋಟಿಗಳ ಕಲೆಕ್ಷನ್‌ ಮೂಲಕ ಭಾರೀ ಯಶಸ್ಸು ಸಾಧಿಸಿದ್ದು, ಪ್ರಭಾಸ್ ಅವರನ್ನು ಪ್ಯಾನ್‌ ಇಂಡಿಯಾ ಮಾತ್ರವಲ್ಲ, ಜಾಗತಿಕ ಸಿನಿಮಾದ ಐಕಾನ್‌ ಆಗಿ ಮಾಡಿದೆ.

ಮುಂಬರುವ ಬಿಗ್‌ ಬಜೆಟ್‌ ಸಿನಿಮಾಗಳು:

  • ಸಲಾರ್ 2: ಶೌರ್ಯಂಗ ಪರ್ವಂ: ಪ್ರಶಾಂತ್ ನೀಲ್‌ ಅವರು ನಿರ್ದೇಶಿಸುತ್ತಿರುವ ಆಕ್ಷನ್‌ ಡ್ರಾಮಾ, ₹360 ಕೋಟಿ ಬಜೆಟ್‌.
  • ಸ್ಪಿರಿಟ್: ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಪ್ರಭಾಸ್‌ ಮೊದಲ ಹೈ-ಬಜೆಟ್‌ ಸಿನಿಮಾ.
  • ಹನು ರಾಘವಪುಡಿ ಪ್ರಾಜೆಕ್ಟ್: 1940ರ ದಶಕದ ಐತಿಹಾಸಿಕ ಕಥಾನಕ.
  • ದಿ ರಾಜಾಸಾಬ್: ಮಾರುತಿ ನಿರ್ದೇಶನದ ಪ್ರಭಾಸ್‌ ಲೀಡ್‌ ರೋಲ್ ‌ನಲ್ಲಿ ಇರುವ ಸಿನಿಮಾ.
  • ಕಲ್ಕಿ 2: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ನಟಿಸುತ್ತಿರುವ ಈ ಚಿತ್ರ 700 ಕೋಟಿ ಬಜೆಟ್‌ನಿಂದ ನಿರ್ಮಾಣವಾಗುತ್ತಿದೆ.

ಪ್ರಭಾಸ್ ಅಭಿಮಾನಿಗಳು ಅವರಿಗೆ ‘ಹ್ಯಾಪಿ ಬರ್ತ್‌ಡೇ’ ಹೇಳಲು ತಯಾರಿ ಮಾಡಿಕೊಂಡಿದ್ದಾರೆ. ಬಾಕ್ಸ್‌ ಆಫೀಸ್‌ ಹಿಟ್‌ಗಳನ್ನು ನೀಡುತ್ತಿರುವ ಪ್ರಭಾಸ್ ಅವರ ಹೊಸ ಸಿನಿಮಾಗಳು ಮತ್ತಷ್ಟು ಕುತೂಹಲವನ್ನು ಹೆಚ್ಚಿಸುತ್ತಿದೆ.

Show More

Leave a Reply

Your email address will not be published. Required fields are marked *

Related Articles

Back to top button