ಕಮಲ್ ಅಭಿನಯದ ಇಂಡಿಯನ್ -2 ಟ್ರೇಲರ್ ನೋಡಿದ್ರಾ?

ಬೆಂಗಳೂರು: ಬಹುನಿರೀಕ್ಷಿತ ಬಹುಭಾಷಾ ಚಲನಚಿತ್ರ ಇಂಡಿಯನ್ -2 ತನ್ನ ಟ್ರೇಲರ್ ಬಿಡುಗಡೆ ಮಾಡಿದೆ. 1996ರಲ್ಲಿ ಬಿಡುಗಡೆ ಆಗಿದ್ದ ಇಂಡಿಯನ್ ಚಿತ್ರದ ಎರಡನೇ ಆವೃತ್ತಿ ಆಗಿರುವ ಈ ಚಿತ್ರವು ಅಪಾರ ತಾರಾಗಣವನ್ನು ಒಳಗೊಂಡಿದೆ.
ವೀರಸೇಕರನ್ ಸೇನಾಪತಿ ಪಾತ್ರದಲ್ಲಿ ಕಮಲ್ ಹಾಸನ್ ಅವರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸಿದ್ದಾರ್ಥ್, ರಕುಲ್ ಪ್ರೀತ್ ಸಿಂಗ್, ಎಸ್.ಜೆ. ಸೂರಿಯ, ಬೋಬಿ ಸಿಂಹ, ದಿವಂಗತ. ವಿವೇಕ್, ಬೃಹ್ಮಾನಂದಂ ಅಭಿನಯಿಸಿದ್ದಾರೆ. ವಿಶೇಷ ಎಂದರೆ, 1996ರ ಇಂಡಿಯನ್ ಚಿತ್ರದಲ್ಲಿ ಪೋಲಿಸ್ ಅಧಿಕಾರಿಯಾಗಿ ಅಭಿನಯಿಸಿದ್ದ ನೆಡುಮುಡಿ ವೇಣು ಅವರು ಇಂಡಿಯನ್ -2 ಚಿತ್ರದಲ್ಲಿ ಕೂಡ ರಿಟೈರ್ಡ್ ಪೋಲಿಸ್ ಅಧಿಕಾರಿಯಾಗಿ ಪಾತ್ರವನ್ನು ಮುಂದುವರೆಸಿದ್ದಾರೆ. ಈ ಚಿತ್ರವು ಜುಲೈ, 12ಕ್ಕೆ ಬಿಡುಗಡೆಗೊಳ್ಳಲಿದೆ.
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ಶಂಕರ್ ಅವರು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇಂಡಿಯನ್ ಮೊದಲ ಭಾಗದ ನಿರ್ದೇಶನವನ್ನು ಕೂಡ ಎಸ್. ಶಂಕರ್ ಆವರೇ ಮಾಡಿದ್ದರು ಪ್ರಸ್ತುತ ರಾಜಕೀಯ ಹಾಗೂ ಭ್ರಷ್ಟಾಚಾರವನ್ನು ಕಥೆಯ ಕೇಂದ್ರದಂತೆ ಇಟ್ಟುಕೊಂಡು ಚಿತ್ರವನ್ನು ತೆರೆಗೆ ತರಲು ತಂಡ ಸಿದ್ದವಾಗಿದೆ.